ಎಪಿಎಂಸಿ ಠಾಣೆ ಪೊಲೀಸರ ‘161’- ತನಿಖೆಗೆ ಆದೇಶ ನೀಡಿದ ಪೊಲೀಸ್ ಕಮೀಷನರ್..
1 min readಹುಬ್ಬಳ್ಳಿ: ಸಾಮಾಜಿಕ ಕಾಳಜಿ ಹೊಂದಿದ್ದನೆನ್ನಲಾದ ವ್ಯಕ್ತಿಯೋರ್ವ ನೀಡಿದ ಮಾಹಿತಿಯನ್ನು ಆಧರಿಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಹಿಡಿದು, ಹಣ ಪಡೆದು ಬಿಟ್ಟು ಕಳಿಸಿದ್ದಲ್ಲದೇ, ವಶಕ್ಕೆ ಪಡೆದಿದ್ದ ಗಾಂಜಾವನ್ನ ಮಾರಾಟ ಮಾಡಿರುವ ಪೊಲೀಸರ ಬಗ್ಗೆ ಕರ್ನಾಟಕವಾಯ್ಸ್.ಕಾಂ ಮಾಹಿತಿ ಹೊರ ಹಾಕಿದ ಕೆಲವೇ ಗಂಟೆಗಳಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ.
ಬೆಳಿಗ್ಗೆ ಹೊರ ಹಾಕಿದ್ದ ಸ್ಟೋರಿ..
ನವನಗರದ ಎಪಿಎಂಸಿ ಠಾಣೆ ಹಾಗೂ ಗೋಕುಲ ಪೊಲೀಸ್ ಠಾಣೆಯಲ್ಲಿನ ‘161’ ಮಾಡಿರೋ ಹಲವರನ್ನ ಡಿಸಿಪಿ ಕೆ.ರಾಮರಾಜನ್ ತನಿಖೆಗೆ ಒಳಪಡಿಸಲಿದ್ದಾರೆ. ಈ ಪ್ರಕರಣದ ಮೂಲಕ ಬಡ್ಡಿ ದಂಧೆ ಮಾಡುತ್ತಿರುವ ಪೊಲೀಸ್ ನ ಬಣ್ಣ ಕಳಚಲಿದೆ ಎಂದು ಹೇಳಲಾಗುತ್ತಿದೆ.
ಇಡೀ ಪ್ರಕರಣವನ್ನ ಮುಚ್ಚಿ ಹಾಕಲು ಹೋಗಿದ್ದನ್ನ ಕರ್ನಾಟಕವಾಯ್ಸ್.ಕಾಂ ಹೊರಗೆ ಹಾಕಿದ್ದು, ವ್ಯವಸ್ಥೆ ಕೆಲ ಸಮಯವಾದರೂ ಸುಧಾರಿಸಲಿ ಎನ್ನುವ ಭರವಸೆ ಹೊಂದಿದೆ. ಅದನ್ನ ದಕ್ಷ ಅಧಿಕಾರಿಗಳು ಮಾಡುವ ಮೂಲಕ, ಜನರಿಗೆ ಸತ್ಯವನ್ನ ಬಹಿರಂಗ ಮಾಡಲಿದ್ದಾರೆ.