ಹೆಚ್ಚುತ್ತಿರುವ ಕೊರೋನಾ ಪಾಸಿಟಿವ್ ಪ್ರಕರಣ: ಹುಬ್ಬಳ್ಳಿ-ಧಾರವಾಡದಲ್ಲಿ ಮತ್ತಷ್ಟು ಬಿಗಿ ಕಾವಲು

ಹುಬ್ಬಳ್ಳಿ: ವಾಣಿಜ್ಯನಗರಿಯ ಒಂದೇ ಕುಟುಂಬದಲ್ಲಿ ಐದು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದ ನಂತರ ಅವಳಿನಗರದಲ್ಲಿ ಮತ್ತಷ್ಟು ಬಿಗಿ ಕಾವಲನ್ನ ಹಾಕಲಾಗಿದ್ದು, ಬೇರೆ ಜಿಲ್ಲೆಯಿಂದ ಬಂದ ಯಾವುದೇ ವಾಹನಗಳನ್ನ ಒಳಗಡೆ ಬಿಟ್ಟುಕೊಳ್ಳುತ್ತಿಲ್ಲ.
ಜಿಲ್ಲಾಧಿಕಾರಿ ದೀಪಾ ಚೋಳನ್ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿದ್ದು, ಧಾರವಾಡ ಜಿಲ್ಲೆಯವರಲ್ಲದವನ್ನ ಜಿಲ್ಲೆಯಲ್ಲಿ ಬಿಟ್ಟುಕೊಳ್ಳಲು ಬಿಗಿ ಕ್ರಮವನ್ನ ಜರುಗಿಸಿದ್ದಾರೆ. ನಗರಗಳ ಸುತ್ತ ಬ್ಯಾರಿಕೇಡ್ ಗಳನ್ನ ಹಾಕಲಾಗಿದ್ದು, ಜನರು ಬರದಂತೆ ತಡೆಯಲಾಗುತ್ತಿದೆ. ಆಕಸ್ಮಿಕವಾಗಿ ಬೇರೆ ಜಿಲ್ಲೆಯವರು ಬಂದರೂ, ಅವರು ಆಯಾ ಜಿಲ್ಲೆಯ ಪರವಾನಿಗೆ ತೆಗೆದುಕೊಂಡು ಬಂದಿರಬೇಕೆಂಬ ನಿಯಮವನ್ನ ಹಾಕಲಾಗಿದೆ.
ನಗರದಲ್ಲಿ ಸರಾಗವಾಗಿ ಮಾರುಕಟ್ಟೆಯ ವ್ಯವಸ್ಥೆಯನ್ನ ಮಾಡಲಾಗಿದ್ದು, ಇದಕ್ಕಾಗಿ ಎಲ್ಲ ಅಧಿಕಾರಿಗಳು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.