ಹುಬ್ಳಿ-ಧಾರ್ವಾಡ್ ಕ್ರೈಂ: ಇಸ್ಪೀಟ್-ಮಟ್ಕಾ: ಆರು ಜನ ಬಂಧನ- ಬೈಕ್ ಕಳುವು- ಯುವಕ ನಾಪತ್ತೆ
ಹುಬ್ಬಳ್ಳಿ/ಧಾರವಾಡ: ದೇಶಪಾಂಡೆನಗರದಲ್ಲಿರುವ ಐಸಿಐಸಿಐ ಬ್ಯಾಂಕಿನ ಮುಂದೆ ನಿಲ್ಲಿಸಿದ ಬೈಕ್ ನ್ನ ಕಳ್ಳತನ ಮಾಡಲಾಗಿದೆ ಎಂದು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕಿನ ಕೆಲಸಕ್ಕಾಗಿ ಬೈಕ್ ಲಾಕ್ ಮಾಡಿಕೊಂಡು ಹೋಗಿದ್ದರೂ ಕಳ್ಳತನ ನಡೆದಿದೆ ಎಂದು ದೂರಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಧಾರವಾಡ ಉಪನಗರ ಪೊಲೀಸ ಠಾಣೆ
ಧಾರವಾಡ ಹಾವೇರಿಪೇಟೆ ಸವದತ್ತಿ ರಸ್ತೆಯಲ್ಲಿರುವ ಹಳಿಯಾಳ ಮೇಸ್ತ್ರೀ ಗ್ಯಾರೇಜ ಹತ್ತಿರ ಸಾರ್ವಜನಿಕ ರಸ್ತೆ ಬದಿಗೆ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ 500 ರೂಪಾಯಿ ಹಣ ಮತ್ತು ಓಸಿ ಬರೆಯುತ್ತಿದ್ದ ಮಟಕಾ ಚೀಟಿಗಳನ್ನ ವಶಕ್ಕೆ ಪಡೆಯಲಾಗಿದೆ.
ಕೇಶ್ವಾಪುರ ಪೊಲೀಸ್ ಠಾಣೆ
ಸರಾಯಿ ಕುಡಿದು ಮಾನಸಿಕವಾಗಿ ಸರಿಯಾಗಿ ಕೆಲಸಕ್ಕೆ ಹೋಗದೇ ಇರುತ್ತಿದ್ದ ಮಹಾಂತೇಶ ಮಟ್ಟಿಕಲ್ಲಿ ಎಂಬಾತ ಕಾಣೆಯಾಗಿದ್ದಾನೆಂದು ಆತನ ಪತ್ನಿ ದೂರು ನೀಡಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಹಳೇ-ಹುಬ್ಬಳ್ಳಿ ಪೊಲೀಸ ಠಾಣೆ
ಮ್ಮಸಾಗರ ಗ್ರಾಮದ ಪ್ಲಾಟ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಸ್ಪೀಟ ಆಡುತ್ತಿದ್ದ ಐವರನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 52 ಿಸ್ಪೀಟ್ ಎಲೆಗಳನ್ನ ಹಾಗೂ 3520 ರೂಪಾಯಿಗಳನ್ನ ವಶಕ್ಕೆ ಪಡೆದು, ಕೆಪಿ ಕಾಯಿದೆ 87 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ
ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ದಿನಾಂಕ:- 26/09/2020 ರಂದು 364 ಕೇಸಗಳನ್ನು ದಾಖಲಿಸಿದ್ದು ಒಟ್ಟು 1,93,200/- ರೂ. ದಂಡ ಹಾಕಲಾಗಿದೆ.