ಹು-ಧಾ ಕ್ರೈಂ: ಕೊಲೆಯತ್ನದ ಆರೋಪಿ ಬಂಧನ- ಮನೆಗಳ್ಳತನ-ಸೈಬರ್ ಕ್ರೈಂ
ಹುಬ್ಬಳ್ಳಿ: ಮನೆಗೆಲಸ ನೀಡಿ ಹಣ ವಂಚನೆ ಮಾಡಿರುವ ಸಂಬಂಧವಾಗಿ ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಗೂಗಲ್ ಸರ್ಚ್ ಹೆಸರಿನಲ್ಲಿ ಮೊಬೈಲ್ ನಂಬರ ಮತ್ತು ಇ-ಮೇಲ್ ಐಡಿ ಪಡೆದು ನಂತರ ಒಂದು ಲಕ್ಷ 65 ಸಾವಿರದಾ 79 ರೂಪಾಯಿಗಳನ್ನ ಪಡೆದು ವಂಚನೆ ಮಾಡಲಾಗಿದೆ ಎಂದು ಎಂದು ದೂರಲಾಗಿದೆ.
ಮನೆಗಳ್ಳತನ
ಹುಬ್ಬಳ್ಳಿ ಗೋಕುಲರೋಡ ನಂದಿನಗರದ ಮನೆ ಬಾಗಿಲಿನ ಕೀಲಿಯನ್ನು ಮುರಿದು ಸುಮಾರು 16 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಹಾಗೂ 250 ಗ್ರಾಂ ತೂಕದ ಬೆಳ್ಳಿಯ ಆರತಿ ಸೆಟ್ ದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ :
ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಅಕ್ಟೋಬರ್ 1ರಂದು 561 ಕೇಸಗಳನ್ನು ದಾಖಲಿಸಿ, 2,91,650/- ರೂ. ದಂಡ ಹಾಕಲಾಗಿದೆ.