ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 82 ವಾರ್ಡ್: ಸರಕಾರದ ಅಧಿಸೂಚನೆ…!

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕ್ಷೇತ್ರಗಳ ವಿಗಂಡನೆಯಿಂದ 82ನ್ನ ಮಾಡಲಾಗಿರುವ ಬಗ್ಗೆ ಕರ್ನಾಟಕ ರಾಜ್ಯಪತ್ರದ ಮೂಲಕ ಹೊರ ಹಾಕಲಾಗಿದ್ದು, ವಾರ್ಡುಗಳ ಬಗ್ಗೆಯಿದ್ದ ಸಂಶಯ ಬಗೆಹರಿದಂತಾಗಿದೆ.
2011ರ ಜನಗಣತಿ ಆಧಾರದ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡುವಾರು ಕ್ಷೇತ್ರ ಪುನರ್ ವಿಂಗಡನೆ ನಿಗಧಿಸಿಪಡಿಸಿರುವ ಸಂಪೂರ್ಣವಾದ ಕರ್ನಾಟಕ ರಾಜ್ಯಪತ್ರ ಇಲ್ಲಿದೆ.

ಅಧಿಸೂಚನೆಯ ಬಗ್ಗೆ ಸಾರ್ವಜನಿಕರು ಆಕ್ಷೇಪಣೆಗಳಿದ್ದರೇ 15ದಿನದಲ್ಲಿ ಧಾರವಾಡ ಜಿಲ್ಲಾಧಿಕಾರಿಗೆ ಲಿಖಿತವಾಗಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಹೇಳಲಾಗಿದೆ.

ಮಹಾನಗರ ಪಾಲಿಕೆಯ ಚುನಾವಣೆ ನಡೆಯದೇ ಈಗಾಗಲೇ ಎರಡು ವರ್ಷ ಕಳೆದಿದ್ದು, ಈಗ ಮತ್ತೆ ಪುನರ್ ಕ್ಷೇತ್ರದ ಬಗ್ಗೆ ಅಧಿಸೂಚನೆ ಹೊರಬಿದ್ದಿದೆ. ಈಗ ಮತ್ತೆ ಕ್ಷೇತ್ರಗಳ ಬಗ್ಗೆ ತಕರಾರನ್ನ ಸಲ್ಲಿಸುತ್ತಾರಾ ಅಥವಾ ಇಲ್ಲವೋ ಎಂಬುದನ್ನ ಕಾದು ನೋಡಬೇಕಿದೆ.