ಹುಬ್ಬಳ್ಳಿ ಸಿಸಿಐಬಿ-ಧಾರವಾಡ ಉಪನಗರ ಠಾಣೆ ಬೆಟ್ಟಿಂಗ್ ದಾಳಿ: 6 ಜನರ ಬಂಧನ- 4ಲಕ್ಷ ವಶ

ಹುಬ್ಬಳ್ಳಿ/ಧಾರವಾಡ: ಐಪಿಎಲ್ ಕ್ರಿಕೆಟ್ ನಡೆಯುತ್ತಿರುವ ಬೆನ್ನಲ್ಲೇ ಅವಳಿನಗರದಲ್ಲಿ ನಿರಂತರವಾಗಿ ಬೆಟ್ಟಿಂಗ್ ನಡೆಯುತ್ತಿದ್ದು, ಹುಬ್ಬಳ್ಳಿಯಲ್ಲಿ ಸಿಸಿಐಬಿ ತಂಡ ದಾಳಿ ಮಾಡಿದ್ದರೇ, ಧಾರವಾಡದಲ್ಲಿ ಉಪನಗರ ಠಾಣೆ ಪೊಲೀಸರು ದಾಳಿ ಮಾಡಿ ಬೆಟ್ಟಿಂಗ್ ಕುಳಗಳನ್ನ ಬಂಧನ ಮಾಡಿದ್ದಾರೆ.
ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಗಣೇಶ ದತ್ತುಸಾ ಹನುಮಸಾಗರ, ನವೀನ ಗಣಪತಸಾ ಜಿತೂರಿ ಹಾಗೂ ದತ್ತಾತ್ರೇಯ ಶಿವಾಜಿ ಜಾಧವ ಎಂಬ ಮೂವರನ್ನ ಬಂಧನ ಮಾಡಿರುವ ಸಿಸಿಐಬಿ ತಂಡ, 25150 ರೂಪಾಯಿ ಹಾಗೂ ನಾಲ್ಕು ಮೊಬೈಲಗಳನ್ನ ವಶಕ್ಕೆ ಪಡೆದಿದ್ದಾರೆ.
ಇನ್ಸಪೆಕ್ಟರ್ ಅಲ್ತಾಪ ಮುಲ್ಲಾ ನೇತೃತ್ವದಲ್ಲಿ ಸಿಸಿಬಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧನ ಮಾಡಿದ್ದಾರೆ.
ಧಾರವಾಡ ಉಪನಗರ ಠಾಣೆ ವ್ಯಾಪ್ತಿಯ ಕರ್ನಾಟಕ ಕಾಲೇಜಿನ ಬಳಿ ಬೆಟ್ಟಿಂಗ್ ಆಡುತ್ತಿದ್ದ ಮೂವರನ್ನ ಬಂಧನ ಮಾಡಿರುವ ಪೊಲೀಸರು 3.46 ಲಕ್ಷ ರೂಪಾಯಿ ಹಾಗೂ ಮೂರು ಮೊಬೈಲಗಳನ್ನ ವಶಕ್ಕೆ ಪಡೆದಿದ್ದಾರೆ.
ಇನ್ಸಪೆಕ್ಟರ ಪ್ರಮೋದ ಎಲಿಗಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಿಎಸೈ ಶ್ರೀಮಂತ ಹುಣಸಿಕಟ್ಟಿ, ಎಸೈ ಆರ್.ಎಚ್.ನದಾಫ, ಸಿಬ್ಬಂದಿಗಳಾದ ಎಸ್.ಪಿ.ನಡುವಿನಮನಿ, ಚಂದ್ರು ನಡುವಿನಮನಿ, ಸಿ.ಡಿ.ಬಳ್ಳಾರಿ, ಎಸ್.ವಿ.ನೀಲಣ್ಣನವರ, ಕೆ.ಎಂ.ಡೊಕ್ಕನವರ, ಪಿ.ಎಸ್.ಕುಂದಗೋಳ, ಆರ್.ಎಚ್.ಬಡ್ನಿ ಸೇರಿದಂತೆ ಹಲವರು ಭಾಗವಹಿಸಿದ್ದರು.