ಹುಬ್ಬಳ್ಳಿ-ಧಾರವಾಡದಲ್ಲೂ ತುರ್ತು ಸ್ಪಂದನ ವ್ಯವಸ್ಥೆ: ಅವಳಿನಗರದಲ್ಲಿನ್ನೂ ಹೊಯ್ಸಳ
1 min readಹುಬ್ಬಳ್ಳಿ: ಕರ್ನಾಟಕ ಸರಕಾರ ಸಾರ್ವಜನಿಕರಿಗೆ ಉಪಯೋಗವಾಗಲು ಜಾರಿಗೊಳಿಸಿದ ತುರ್ತು ಸ್ಪಂದನ ವ್ಯವಸ್ಥೆ-112, ಇನ್ನೂ ಮುಂದೆ ಹುಬ್ಬಳ್ಳಿ-ಧಾರವಾಡದಲ್ಲೂ ಆರಂಭವಾಗಲಿದ್ದು, ಅದಕ್ಕಾಗಿಯೇ ಇಂದು ಬೆಳಿಗ್ಗೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಚಾಲನೆ ನೀಡಲಾಯಿತು.
ತುರ್ತು ಸಂದರ್ಭಗಳಲ್ಲಿ ಪೊಲೀಸ್, ಅಗ್ನಿಶಾಮಕ ಮತ್ತು ಅಂಬ್ಯುಲೆನ್ಸಗಾಗಿ 112 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ತುರ್ತು ಸಮಯದಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂಧಿಸಲು ಅವಳಿನಗರ ವ್ಯಾಪ್ತಿಯಲ್ಲಿ 112 ಆರಂಭಗೊಂಡಿದ್ದು, ಹೊಯ್ಸಳ ವಾಹನಗಳಿಗೆ ಪೊಲೀಸ್ ಆಯುಕ್ತ ಲಾಬುರಾಮ್ ಚಾಲನೆ ನೀಡಿದ್ರು.
ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ಈ ಉದ್ದೇಶಕ್ಕಾಗಿ 15 ವಾಹನಗಳನ್ನ ನೀಡಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನ ಪಡೆಯಬಹುದಾಗಿದೆ. ನೂತನವಾಗಿ 112 ಸಹಾಯವಾಣಿಗೆ ಕರೆ ಮಾಡಿದರೇ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ ವ್ಯವಯಸ್ಥೆಯಡಿ ಅವಳಿನಗರ ವ್ಯಾಪ್ತಿಯಲ್ಲಿ ಕರೆ ಬಂದರೇ ತಕ್ಷಣವೇ ಸಹಾಯ ದೊರಕಲಿದೆ.
112 ತುರ್ತು ಸಹಾಯವಾಣಿ ನೆರವು ಪಡೆಯಲು ನೇರ ಕರೆ ಮಾಡಬಹುದು ಅಥವಾ ಗೂಗಲ್ ಪ್ಲೇ ಸ್ಟೋರನಲ್ಲಿ ‘112 ಇಂಡಿಯನ್ ಮೊಬೈಲ್ ಆಪ್’ ನ್ನು ಡೌನಲೋಡ್ ಮಾಡಿಕೊಂಡು ಸಹಾಯವನ್ನ ಪಡೆಯಬಹುದಾಗಿದೆ.