ಚೇತನಾ ಕಾಲೇಜ ಬಳಿಯ ಬೆಳ್ಳಂಬೆಳಿಗ್ಗೆ ಗಾಬರಿಯಾಗಿ ಓಡಿದ ಜನ- ಅಲ್ಲೇನಾಗಿದೆ ಗೊತ್ತಾ..?
1 min readಹುಬ್ಬಳ್ಳಿ: ನಗರದ ಪ್ರಮುಖ ಸ್ಥಳವಾಗಿರುವ ಅಕ್ಷಯ ಕಾಲೋನಿ ಪ್ರದೇಶದ ಚೇತನಾ ಕಾಲೇಜ್ ಬಳಿಯ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೆಳ್ಳಂಬೆಳಿಗ್ಗೆ ವಾಕಿಂಗ್ ಗೆ ಹೋದ ಜನ ಗಾಬರಿಯಿಂದ ಓಡಿ ಹೋದ ಘಟನೆ ನಡೆದಿದೆ.
ಸುಮಾರು 45ರಿಂದ 48 ವಯಸ್ಸಿನ ಪುರುಷ ವ್ಯಕ್ತಿಯು ಜಿನ್ಸ್ ಪ್ಯಾಂಟ್ ಟೀ ಶರ್ಟ್ ಹಾಕಿಕೊಂಡಿದ್ದು, ಬಸ್ ನಿಲ್ದಾಣದ ಮೇಲ್ ಛಾವಣಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಮೃತ ವ್ಯಕ್ತಿಯ ಒಂದು ಕಾಲು ಬಸ್ ನಿಲ್ದಾಣದಲ್ಲಿನ ಆಸನಕ್ಕೆ ತಾಗಿದ್ದು, ಅನುಮಾನ ಮೂಡಿಸಿದೆ.
ಈ ಪ್ರದೇಶದ ನೂರಾರೂ ಜನರು ಇದೇ ಮಾರ್ಗದಿಂದ ತೋಳನಕೆರೆಯತ್ತ ಹೋಗಿ ವಾಕಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲ, ಇನ್ನೂ ಕೆಲವರು ಮೊಬೈಲ್ ಹಿಡಿದುಕೊಂಡು, ಹಾಡು ಕೇಳುತ್ತ ಇದೇ ಬಸ್ ನಿಲ್ದಾಣದಲ್ಲಿ ಕೂತು ಹೋಗುತ್ತಾರೆ. ಅಂತವರೆಲ್ಲ ಇಂದು ಗಾಬರಿಯಿಂದ ವಾಕಿಂಗ್ ಮಾಡದೇ ಮನೆ ಸೇರಿದ್ದಾರೆ.
ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲವಾದರೂ, ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾನೂನು ಕ್ರಮವನ್ನ ಜರುಗಿಸುತ್ತಿದ್ದಾರೆ. ಈ ಪ್ರಕರಣ ಆತ್ಮಹತ್ಯೆಯೋ ಅಥವಾ ಬೇರೆ ಥರದ್ದೋ ಎಂಬುದನ್ನ ಪೊಲೀಸರು ಪತ್ತೆ ಹಚ್ಚಬೇಕಿದೆ.