ತುತ್ತು ಅನ್ನಕ್ಕಾಗಿ ಬಂದವ- ಹುಬ್ಬಳ್ಳಿಯ ಗೋಡೆಯೊಳಗೆ ಸಿಕ್ಕು ದುರಂತ ಅಂತ್ಯ…

ಹುಬ್ಬಳ್ಳಿ: ಹೊಟ್ಟೆ ಹೊರೆಯಲು ವಾಣಿಜ್ಯನಗರಿಗೆ ಬಂದಿದ್ದ ಕಾರ್ಮಿಕನೋರ್ವ ಕೆಲಸ ಮಾಡುವಾಗಲೇ ಗೋಡೆ ಬಿದ್ದು ದುರ್ಮರಣಕ್ಕೀಡಾದ ಘಟನೆ ಘಂಟಿಕೇರಿಯಲ್ಲಿ ನಡೆದಿದೆ.

ಶಿಗ್ಗಾಂವಿ ತಾಲೂಕಿನ ಕಡದಳ್ಳಿ ಗ್ರಾಮದ ಶಿವಪ್ಪ ಮುಂದಿನಮನಿ ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ. ದಿನನಿತ್ಯದಂತೆ ಕೆಲಸಕ್ಕೆ ಬಂದಾಗ ದುರ್ಘಟನೆ ನಡೆದಿದೆ.
ಘಂಟಿಕೇರಿಯಲ್ಲಿ ಹಳೇಯ ಮನೆಯ ಗೋಡೆ ತೆರವು ಮಾಡುವಾಗ, ಗೋಡೆ ಆತನ ಮೇಲೆ ಬಿದ್ದಿದ್ದು, ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ತೆರಳಿರುವ ಘಂಟಿಕೇರಿ ಠಾಣೆಯ ಪೊಲೀಸರು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸಗೆ ರವಾನೆ ಮಾಡಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.