Posts Slider

Karnataka Voice

Latest Kannada News

ಹುಬ್ಬಳ್ಳಿಯ ಮೂವರು “ಖದೀಮ ಕಳ್ಳರು” ಅಂದರ್: ಎಸಿಪಿ ವಿನೋದ ಮುಕ್ತೆದಾರ ತಂಡದ ಬಗ್ಗೆ ಡಿಸಿಪಿ ಹೇಳಿದ್ದೇನು ಗೊತ್ತಾ…!?

1 min read
Spread the love

ಹುಬ್ಬಳ್ಳಿ: ನಗರದ ಹೊರವಲಯ ಮತ್ತು ನಗರದೊಳಗೆ ಸುಲಿಗೆ ಮತ್ತು ದರೋಡೆ ಮಾಡುತ್ತಿದ್ದ ಮೂವರು ಖದೀಮರನ್ನ ಪತ್ತೆ ಹಚ್ಚಿ ಮಾಲು ಸಮೇತ ಹಿಡಿಯುವಲ್ಲಿ ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ರವಿಚಂದ್ರ ಬಡಪಕ್ಕೀರಪ್ಪನವರ ತಂಡ ಯಶಸ್ವಿಯಾಗಿದೆ.

ಆರೋಪಿಗಳ ಬಂಧನ ಹೇಗಾಯಿತು ಗೊತ್ತಾ.. ಡಿಸಿಪಿ ಆರ್.ಬಿ.ಬಸರಗಿ ಮಾಹಿತಿ ನೋಡಿದ್ದಾರೆ ನೋಡಿ..

ನಗರದ ವಿವಿಧ ಕಡೆಗಳಲ್ಲಿ ದರೋಡೆ ಮಾಡುತ್ತಿದ್ದವರ ಮೇಲೆ ಕಣ್ಣಿಟ್ಟಿದ್ದ ಉಪನಗರ ಠಾಣೆಯ ಇನ್ಸ್ಪೆಕ್ಟರ್ ರವಿಚಂದ್ರ  ಟೀಮ್, ACP ವಿನೋದ್ ಮುಕ್ತೆದಾರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆರೋಪಿಗಳಿಂದ ದರೋಡೆಗೆ ಬಳಸುತ್ತಿದ್ದ ಆಯುಧಗಳನ್ನು ಹಾಗೂ ದರೋಡೆ ಮಾಡಿದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನ ಹಳೇಹುಬ್ಬಳ್ಳಿ ಈಶ್ವರನಗರದ ಹಬೀದ ಅಜಗರ ಅಲಿ ಕಲಾಸಿ, ಹಳೇಹುಬ್ಬಳ್ಳಿ ಜಿದ್ದಿಇಮ್ರಾನ್ ಅಲಿಯಾಸ್ ಕಟಗಾ ಇಮ್ತಿಯಾಜ್ ಮನಿಯಾರ, ಮಂಟೂರ ರಸ್ತೆಯ ನಿವಾಸಿ ಜೈಲಾನಿ ಬಾಷಾಸಾಬ ಶೇರಖಾನ ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದಾಖಲಾದ ಮಾಂಗಲ್ಯಸರ, ಮೊಬೈಲ್ ದರೋಡೆ ಪ್ರಕರಣ, ಕಲಘಟಗಿಯ ಬೈಕ್ ಕಳ್ಳತನ, ವಿದ್ಯಾನಗರ ಠಾಣೆಯ ಸುಲಿಗೆ ಮತ್ತು ಕಳ್ಳತನ ಪ್ರಕರಣ ಇವರಿಂದ ಪತ್ತೆಯಾಗಿವೆ.


Spread the love

Leave a Reply

Your email address will not be published. Required fields are marked *