ನಾಗಾರ್ಜುನ “ಬ್ಯಾಟಿಂಗ್”ಗೆ ಡಿಚ್ಚಿಯಾದ ಎಸ್ ಡಿಎಂ ಕ್ರಿಕೆಟ್ ಅಕಾಡೆಮಿ…!
1 min readಹುಬ್ಬಳ್ಳಿ: ಪಿಎನ್ಆರ್ ಟ್ರೋಪಿ ಅಂಡರ್ 16 ಇಂಟರ್ ಕ್ಯಾಂಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾಗಾರ್ಜುನ ಎಸ್.ಪಾಟೀಲ ಸಿಡಿಸಿದ ಭರ್ಜರಿ ಅರ್ಧ ಶತಕದಿಂದ ಹುಬ್ಬಳ್ಳಿಯ ನೆಟ್ ತಂಡ ಧಾರವಾಡದ ಎಸ್ ಡಿಎಂ ಕ್ರಿಕೆಟ್ ಅಕಾಡೆಮಿಯ ವಿರುದ್ಧ 30 ಓಟಗಳ ಜಯ ಗಳಿಸಿದೆ.
ಹುಬ್ಬಳ್ಳಿಯ ರೇಲ್ವೆ ಮೈದಾನದಲ್ಲಿಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚಾಂಪಿಯನ್ಸ್ ತಂಡ ನಿಗದಿತ 30 ಓವರಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ನಾಗಾರ್ಜುನ ಪಾಟೀಲ 70 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 54 ರನ್ ಬಾರಿಸಿ, ತಂಡದ ಮೊತ್ತ ಹೆಚ್ಚಾಗಲು ಕಾರಣವಾದರು. ಸಿದ್ಧು ಸಾವೋಜಿ 22, ರಿಷಿ ಗುಡಿಮನಿ 32, ಆಶೀಷ ಪಾಟೀಲ 17 ರನ್ ಗಳಿಸಿದ್ದು, ಎಸ್ ಡಿಎಂ ಅಕಾಡೆಮಿ ತಂಡದ ಪರವಾಗಿ ಪ್ರಭು ಮೂರು ವಿಕೆಟ್ ಪಡೆದರು.
168 ರನ್ ಗಳ ಗುರಿಯೊಂದಿಗೆ ಕಣಕ್ಕಿಳಿದ ಎಸ್ ಡಿಎಂ ತಂಡ 28.5 ಓವರಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 137 ರನ್ ಗಳನ್ನ ಗಳಿಸುವಲ್ಲಿ ಮಾತ್ರ ಶಕ್ತವಾಯಿತು.
ಗೆಲುವಿನ ತಂಡದ ಪರವಾಗಿ ಉತ್ತಮ ಅರ್ಧ ಶತಕ ಗಳಿಸಿದ ನಾಗಾರ್ಜುನ ಪಾಟೀಲ ಪಂದ್ಯ ಪುರುಷ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡರು.
ನಾಗಾರ್ಜುನ ಪಾಟೀಲ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರ ಹಿರಿಯ ಪುತ್ರರಾಗಿದ್ದಾರೆ.