Posts Slider

Karnataka Voice

Latest Kannada News

“ಹುಬ್ಬಳ್ಳಿ ಹುಡ್ದಿ-03”- ಶೇತ್ಕಿ ಜಮೀನಲ್ಲಿ ಒಳ ವ್ಯವಹಾರ- ಮಹಾನಗರ ಪಾಲಿಕೆ ಅಧಿಕಾರಿಗಳು ಭಾಗಿ…!!!!

Spread the love

ಸಾಮಾಜಿಕ ಕಾಳಜಿ ತೋರಿಸುವ ಮುಖವಾಡ ಹೊಂದಿದವರು… ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಹೊರಡುವ ನೌಟಂಕಿಗಳದ್ದೆ ಕಾರುಬಾರು

ಹುಬ್ಬಳ್ಳಿ: ಗೋಕುಲ ರಸ್ತೆಯ ಸರ್ವೇ ನಂಬರ 98 1ಅ/2 ಜಮೀನು ಶೇತ್ಕಿಯಾಗಿದ್ದರೂ ಅವ್ಯಾಹತವಾಗಿ ಕಮರ್ಷಿಯಲ್ ವ್ಯವಹಾರ ನಡೆಸಲಾಗುತ್ತಿದೆಯಾದರೂ, ಮಹಾನಗರ ಪಾಲಿಕೆ ತನಗೆ ಏನೂ ಗೊತ್ತೆಯಿಲ್ಲದಂತೆ ನಡೆದುಕೊಳ್ಳುತ್ತಿರುವುದು ಸೋಜಿಗ ಮೂಡಿಸಿದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಪ್ರಮುಖ‌ ರಸ್ತೆಯಲ್ಲಿಯೇ ಇಲ್ಲೀಗಲ್ ವ್ಯವಹಾರ ನಡೆದರೂ, ಕಾಟಾಚಾರದ ಪ್ರಯತ್ನವನ್ನ ಮಾಡುತ್ತಿದೆ ಎಂಬುದು ಈ ಭಾಗದ ಎಲ್ಲರಿಗೂ ಗೊತ್ತಿರದ ವಿಚಾರವೇನಲ್ಲ.

ಹುಬ್ಬಳ್ಳಿಯ ಪಾಲಿಕೆಯ ವಲಯ ಸಹಾಯಕ ಆಯುಕ್ತರಾದ ಡಾ.ಚಂದ್ರಶೇಖರಗೌಡ ಮಾಲೀಪಾಟೀಲ ಅವರು ಇಲ್ಲಿ ನಡೆಯುತ್ತಿರುವ ಎಲ್ಲವೂ ಗೊತ್ತಿದ್ದರೂ, ಏನೂ ಗೊತ್ತೆಯಿಲ್ಲದಂತೆ ಇರುವುದು ಕಂಡು ಬರುತ್ತಿದೆ.

ಅಧಿಕೃತವಾಗಿ ಯಾವುದೇ ಪರವಾನಿಗೆ ಪಡೆಯದೇ ಶೆಡ್‌ಗಳನ್ನ ಮಾಡಿ ಈಗಾಗಲೇ ಇಲ್ಲಿ ಹೊಟೇಲ್, ಕಾರ್ ವಾಷಿಂಗ್, ಬೆಲ್ಲದ ಚಾ, ಗೋ ಗ್ರೀನ್, ಫಿಶಲ್ಯಾಂಡ್ ಸೇರಿದಂತೆ ಹಲವು ವಾಣಿಜ್ಯದ ವ್ಯವಹಾರ ನಡೆಯುತ್ತಿದೆ.

ಮಹಾನಗರ ಪಾಲಿಕೆಯ ಆದಾಯವನ್ನ ಕೋತಾಗೊಳಿಸುವ ಈ ಯತ್ನಕ್ಕೆ ಕಡಿವಾಣ ಹಾಕುವ ಕೆಲಸವನ್ನ ಮಾಡುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *

You may have missed