ಹುಬ್ಬಳ್ಳಿಯ “ಎಂಡಿ ದಾವೂದ್ ಅಂದರ್”- ಸೈಂಟಿಸ್ಟ್ ಮಂಜ್ಯಾ ಎಸ್ಕೇಪ್: ಪೊಲೀಸರ ಕ್ಯಾಮರಾ ಫೀಸ್ ಫೀಸ್…..!!!!

ರೌಡಿ ಶೀಟರ್’ಗಳು ನಡೆಸುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ: ಓರ್ವ ಎಸ್ಕೇಪ್ 6 ರೌಡಿಶೀಟರ್ ಲಾಕ್
ಹುಬ್ಬಳ್ಳಿ: ಮಂಟೂರ್ ರಸ್ತೆಯಲ್ಲಿ ರೌಡಿಶೀಟರ್’ಗಳು ನಡೆಸುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ಹಾಗೂ ಶಹರ ಠಾಣೆಯ ಪೊಲೀಸರು ದಾಳಿಯನ್ನು ಮಾಡಿದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಆರೋಪದಡಿಯಲ್ಲಿ 6 ಜನ ರೌಡಿ ಶೀಟರ್’ಗಳು ಸೇರಿದಂತೆ 19 ಜನ ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ…
ಮಂಟೂರ್ ರಸ್ತೆಯ ಮನೆಯೊಂದರಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಹಲವು ರೌಡಿ ಶೀಟರ್’ಗಳು ಸೇರಿ ಇಸ್ಪೀಟ್ ಆಟವನ್ನು ಆಡಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿಯನ್ನು ಮಾಡಿದಾಗ ಹಲವು ರೌಡಿ ಶೀಟರ್ ಗಳು ಪೊಲೀಸರನ್ನು ನೂಕಿ ಪೊಲೀಸರ ಹ್ಯಾಂಡಿ ಕ್ಯಾಮ್ ಒಡೆದು ಹಾಕಿ ಪರಾರಿಯಾಗಿದ್ದು ಈ ವೇಳೆ ಸಿಸಿಬಿ ಪೊಲೀಸ್ ಸಿಬ್ಬಂದಿ ಓರ್ವ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಮೀಷನರ್ ಎನ್.ಶಶಿಕುಮಾರ್ ಹೇಳಿಕೆ…
ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಯ ಆರೋಗ್ಯವನ್ನು ಕಮಿಷನರ್ ಎನ್. ಶಶಿಕುಮಾರ್ ವಿಚಾರಣೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 61000 ಸಾವಿರ ನಗದು, 11 ಮೊಬೈಲ್ ಗಳನ್ನು ವಶಕ್ಕೇ ಪಡೆಯಲಾಗಿದ್ದು ಆರೋಪಿಗಳ ಮೇಲೆ ಶಹರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡೆಸಿದ ಹಾಗೂ ಜೂಜಾಟದ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಕಮೀಷನರ್ ಶಶಿಕುಮಾರ್ ಹೇಳಿದರು.
ದೀಪಾವಳಿ ಇದೆ ಎಂದು ಜೂಜಾಟ್ ಆಡಿದ್ರೆ ನಡೆಯುತ್ತೆ ಎಂದು ಜೂಜಾಟದಲ್ಲಿ ತೊಡಗಿದ್ರೆ ಮುಲಾಜಿಲ್ಲದೆ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಜೂಜು ಕೋರರಿಗೆ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.