ಹುಬ್ಬಳ್ಳಿಯಲ್ಲಿ “ಸಿಲಿಂಡರ್- ಬೈಕ್” ಶವ ಮಾಡಿ ಪೂಜಿಸಿದ ಕಾಂಗ್ರೆಸ್ಸಿಗರು..!
1 min readಹುಬ್ಬಳ್ಳಿ: ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರಿಂದ ನಗರದ ದುರ್ಗದ ಬೈಲ್ ದಲ್ಲಿ ಸಿಲಿಂಡರ್, ಬಾಳೆ ಹಣ್ಣು, ಬೈಕ್ ಅಣುಕು ಶವ ಪೂಜೆ ಮಾಡುವುದರ ಮೂಲಕ ಬೃಹತ್ ಪ್ರತಿಭಟನೆ ಕೈಗೊಳ್ಳಲಾಯಿತು.
ಈ ವೇಳೆ ದೇಶದ ಆರ್ಥಿಕ ದುಃಸ್ಥಿತಿ, ಪೆಟ್ರೋಲ್ ದರ ಏರಿಕೆ ಹಾಗೂ ಬಿಜೆಪಿಗರಿಂದ ದೇಶದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಹಿಂಸಾಚಾರಗಳ ವಿರುದ್ಧವಾಗಿಯೂ ಕೂಡ ಪ್ರತಿಭಟಿಸಲಾಯಿತು.
ಈ ಸಮಯದಲ್ಲಿ ಮಾತನಾಡಿದ ರಜತ ಉಳ್ಳಾಗಡ್ಡಿಮಠ, ಇನ್ನೂರು ಅಥವಾ ಮುನ್ನೂರು ರೂಪಾಯಿ ಪೆಟ್ರೋಲ್ ದರ ಆದರೂ ಕೂಡಾ ಮೋದಿಗಾಗಿ ನಾವು ಪೆಟ್ರೋಲ್ ಖರೀದಿಸುತ್ತೇವೆ ಎನ್ನುವ ಭಕ್ತರಲ್ಲಿ ಕಳಕಳಿಯ ವಿನಂತಿ.
ದಯವಿಟ್ಟು , ನಿಮ್ಮದೇ ಆದ ಪೆಟ್ರೋಲ್ ಬಂಕ್ ತಯಾರಿ ಮಾಡಿಕೊಳ್ಳಿ, ಅದರಲ್ಲಿ ಸಾವಿರ ರೂಪಾಯಿ ಆದರೂ ಕೊಟ್ಟು ಖರೀದಿಸಿ, ಮಧ್ಯಮ ವರ್ಗದ ಹಾಗೂ ಬಡಪಾಯಿ ಜೀವಿಗಳು ದ್ವಿಚಕ್ರ ವಾಹನಗಳ ಮೂಲಕ ಇತರ ಹಳ್ಳಿಗಳಿಗೆ ತೆರಳಿ ಆಯಾ ದಿನಬಳಕೆಯ ವಸ್ತುಗಳಾಗಿರಬಹುದು ಅಥವಾ ಇನ್ನಿತರ ಗೃಹ ಬಳಕೆಯ ವಸ್ತುಗಳನ್ನು ಮಾರಾಟ ಮಾಡಿ ತಮ್ಮ ಆ ದಿನದ ಉಪಜೀವನವನ್ನು ನೋಡಿಕೊಳ್ಳುವಂತವರಿಗೆ ದಯವಿಟ್ಟು ಕಡಿಮೆ ದರದಲ್ಲಿ ಪೆಟ್ರೋಲ್ ಒದಗಿಸಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹುಬ್ಬಳ್ಳಿ-ಧಾರವಾಡ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತನ್ಯ ಬಿಜವಾಡ , ಶಹಜಾನ್ ಮುಜಾಹಿದ್ , ಗೋವಿಂದ್ ಬೆಲ್ದೋನಿ, ಸಮೀರ್ ಖಾನ್, ಭಾರತಿ ಬದ್ದಿ, ನಿರ್ಮಲಾ ಮಾನೆ, ರಾಹುಲ್ ಚಂದಾವರ್ಕರ್ , ಡ್ಯಾನಿಯಲ್ ಹೆಗಡೆ , ಸೈಫ್ ಮುಲ್ಲಾ , ಸುನಿಲ್ ಮರಾಠೆ , ನವೀನ ಶಿಸನಳ್ಳಿ, ಮಣಿಕಂಠ ಪಿರಗೊಜಿ, ಪ್ರಜ್ವಲ್ ಮೋರೆ , ನಾಗರಾಜ್ ಹಿರೇಮಠ, ಅಂಕಿತ ಮುಂತಾದವರು ಉಪಸ್ಥಿತರಿದ್ದರು.