ಬಿಡುವಿಲ್ಲದ ಒತ್ತಡದ ಮಧ್ಯೆಯೂ “ಸಂಬಂಧ ಮರೆಯದ ಸಿಎಂ” ಬಸವರಾಜ ಬೊಮ್ಮಾಯಿ..
1 min readಹುಬ್ಬಳ್ಳಿ: ರಾಜ್ಯದ ದೊರೆ ಬಸವರಾಜ ಬೊಮ್ಮಾಯಿ ಅವರು ಮೊದಲಿಂದಲೂ ಸಂಬಂಧಗಳಿಗೆ ಗೌರವ ಕೊಡುತ್ತ ಬಂದಿದ್ದೂ, ಸಿಎಂ ಆದ ನಂತರವೂ ಅದನ್ನ ಮುಂದುವರೆಸಿಕೊಂಡು ಹೋಗಿ, ಜನರ ಪ್ರೀತಿಗೆ ಕಾರಣವಾಗಿದ್ದಾರೆ.
ಹೌದು… ಇಂದು ಕೂಡಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಿಗ್ಗೆಯಿಂದಲೇ ನಗರದ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೂ, ಅವರ ಮನಸ್ಸು ಬೇರೆ ಕಡೆನೇ ಇತ್ತು. ಅದೇ ವೀರಭದ್ರಪ್ಪ ಅಸುಂಡಿ ಅವರ ನಿವಾಸಕ್ಕೆ ಹೋಗುವ ತವಕ.
ವೀರಭದ್ರಪ್ಪ ಅಸುಂಡಿಯವರು ನಿಧನರಾದ ಹಿನ್ನೆಲೆಯಲ್ಲಿ ತಮ್ಮ ಬಿಡುವಿಲ್ಲದ ಸಮಯದಲ್ಲೂ ಅವರ ನಿವಾಸಕ್ಕೆ ಭೇಟಿ, ವೀರಭದ್ರಪ್ಪರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಅಸುಂಡಿಯವರ ಕುಟುಂಬದ ಜೊತೆ ದಶಕಗಳಿಂದಲೂ ಉತ್ತಮ ಬಾಂಧವ್ಯ ಹೊಂದಿರೋ ಬಸವರಾಜ ಬೊಮ್ಮಾಯಿ ಅವರು, ಸಿಎಂ ಆದ ನಂತರವೂ ಅದನ್ನ ಮುಂದುವರೆಸಿಕೊಂಡು ಹೋಗಿದ್ದು ಪ್ರತಿಯೊಬ್ಬರು ಮಾತನಾಡಿಕೊಳ್ಳುವಂತಾಯಿತು.
ವೀರಭದ್ರಪ್ಪ ಅಸುಂಡಿಯವರ ನಿಧನದ ಸಮಯದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಶಾಸಕರುಗಳಾದ ಅರವಿಂದ ಬೆಲ್ಲದ, ಶ್ರೀನಿವಾಸ ಮಾನೆ, ಪ್ರಸಾದ ಅಬ್ಬಯ್ಯ, ನಿಜಗುಣಾನಂದ ಶ್ರೀ ಗಳು, ಯರಡೆತ್ತಿನ ಮಠದ ಶ್ರೀ ಗಳು, ಚಿಕ್ಕೇನಕೊಪ್ಪದ ಶ್ರೀಗಳು, ಮುಸ್ಲಿಂ ಸಮಾಜದ ಧರ್ಮಗುರುಗಳು ತಾಜುದ್ದೀನ ಪೀರಾ ಖಾದ್ರಿ, ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ, ಇಸ್ಮಾಯಿಲ್ ಕಾಲೇಬುಡ್ಡೆ, ಮಾಜಿ ಶಾಸಕ ನಾಗರಾಜ ಛಬ್ಬಿ, ಕೆ ಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಾಜಿ ಸಚಿವ ಪಿ.ಸಿ. ಸಿದ್ಧನಗೌಡ, ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ, ಮಾಜಿ ಸಂಸದ ಐ.ಜಿ. ಸನದಿ, ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಅಂಜುಮನ್ ಸಂಸ್ಥೆಯ ಮೊಹ್ಮದ್ ಯೂಸುಫ್ ಸವಣೂರ, ಮುಸ್ಲಿಂ ಸಮಾಜದ ಹಿರಿಯ ಮುಖಂಡ ಅಬ್ದುಲ್ ವಹಾಬ್ ಮುಲ್ಲಾ, ಎಂ.ಎಸ್. ಅಕ್ಕಿ, ಅರವಿಂದ ಕಟಗಿ, ವೀರಭದ್ರಪ್ಪ ಹಾಲಹರವಿ, ಧಾರವಾಡದ ಹಿರಿಯ ಮುಖಂಡ ಇಸ್ಮಾಯಿಲ್ ತಮಟಗಾರ, ಜಿ.ಎಂ. ಚಿಕ್ಕಮಠ, ಕುಂದಗೋಳ BJP ಮುಖಂಡರುಗಳಾದ ಚಂದ್ರಶೇಖರ ಗೋಕಾಕ, ಎಂ ಆರ್ ಪಾಟೀಲ್, ಬಸವರಾಜ ಅಮ್ಮಿನಭಾವಿ, ದೀಪಕ ಚಿಂಚೋರೆ, ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ್, ಶಾಕೀರ ಸನದಿ, ರಾಜಶೇಖರ ಮೆಣಸಿನಕಾಯಿ, ಪರ್ವೇಜ್ ಕೊಣ್ಣೂರ, ಸಮದ ಗುಲ್ಬರ್ಗಾ, ಸಮದ ಜಮಖಾನೆ, ಜಯತೀರ್ಥ ಕಟ್ಟಿ, AIMIM ಜಿಲ್ಲಾ ಅಧ್ಯಕ್ಷ ನಜೀರ್ ಹೊನ್ಯಾಳ, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಸಿಂಘಿ, ಬತುಲ್ ಕಿಲ್ಲೇದಾರ, ಬತುಲ್ ಕಿಲ್ಲೇದಾರ, ಸದಾನಂದ ಡಂಗನವರ, ಶಾರುಖ ಮುಲ್ಲಾ, ಎಫ್.ಎಚ್.ಜಕ್ಕಪ್ಪನವರ, ಹಾಶೀಂ ಹಿಂಡಸಗೇರಿ, ಮರಾಠಾ ಸಮಾಜದ ಮುಖಂಡರುಗಳಾದ ಸಂಭಾಜಿ ದಳವಿ, ಸುನೀಲ್ ದಳವಿ, ಅಜ್ಜಪ್ಪಾ ಬೆಂಡಿಗೇರಿ, ಗಣೇಶ ಟಗರಗುಂಟಿ ಸೇರಿದಂತೆ ಹಲವು ರೈತ ಮುಖಂಡರು ಆಗಮಿಸಿದ್ದರು.