ಹುಬ್ಬಳ್ಳಿ: ನಂಬಿಸಿ 62 ಲಕ್ಷ ರೂ. ವಂಚಿಸಿದ್ದ ಪ್ರತಿಷ್ಠಿತ ಮನೆತನದ “ತಂದೆ-ಮಗ” ಅರೆಸ್ಟ್…!!!
ಹುಬ್ಬಳ್ಳಿ: ನೌಕರಿ ಕೊಡಿಸುವ ನೆಪದಲ್ಲಿ ನಂಬಿಕೆ ಬೆಳೆಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ತಂದೆ-ಮಗನನ್ನ ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಮಿಥುನ ಲಕ್ಷ್ಮಣ ತೋಡಕರ ಎಂಬುವವರಿಗೆ ವಂಚನೆ ಮಾಡಿದ್ದ ರಾಜೇಂದ್ರ ಕೊಕಟನೂರ ಹಾಗೂ ರಾಜೇಂದ್ರ ಅವರ ಪುತ್ರ ಕಾರ್ತೀಕ ಕೊಕಟನೂರ ಎಂಬುವವರೇ ಬಂಧನಕ್ಕೆ ಒಳಗಾಗಿದ್ದಾರೆ.
ದೊಡ್ಡ ದೊಡ್ಡವರ ಪರಿಚಯ ಇದೆ ಎಂದು ಮಿಥುನ್ ಎಂಬುವವರನ್ನ ನಂಬಿಸಿ, ಹಂತ ಹಂತವಾಗಿ 62 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನ ಪಡೆದು ವಂಚಿಸಿದ್ದರು.