ಹುಬ್ಬಳ್ಳಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸರಗಳ್ಳತನ

ಹುಬ್ಬಳ್ಳಿ: ಔಷಧ ತರಲು ಪ್ರಭು ಮೆಡಿಕಲ್ ಬಂದು ಸಿಗದೇ ಇದ್ದಾಗ ಮನೆಗೆ ಹೋಗಲು ಆಟೋ ಹುಡುಕುತ್ತಿದ್ದ ಮಹಿಳೆಯನ್ನ ವಂಚಿಸಿ ಸರವನ್ನ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ.
ನಡು ಮಧ್ಯಾಹ್ನವೇ ಘಟನೆ ನಡೆದಿದ್ದು, ಮೆಡಿಕಲ್ ಶಾಪ್ ನಲ್ಲಿ ಔಷಧ ಸಿಗದೇ ಕೋರ್ಟ್ ಕಡೆ ಮರಳುತ್ತಿದ್ದಾಗ ತಲೆಸುತ್ತಿ ಬಂದ ಹಾಗೇ ಆಗಿದ್ದಕ್ಕೆ ಕಟ್ಟೆಯ ಮೇಲೆ ಕೂತು, ದಾರಿಯಲ್ಲಿ ಹೊರಟಿದ್ದ ವ್ಯಕ್ತಿಯನ್ನ ಕರೆದು ಆಟೋ ತರಲು ಹೇಳಿದಾಗ, ಆತನೇ ಸರವನ್ನ ದೋಚಿಕೊಂಡು ಹೋಗಿದ್ದಾನೆಂದು ದೂರಲಾಗಿದೆ.
ಸುಮಾರು 20ರಿಂದ 25 ವರ್ಷ ವಯಸ್ಸಿನ ಗಿಡ್ಡಗೆ ಕೆಂಪಗೆ ಕಾಣುವ ವ್ಯಕ್ತಿಯೇ ಮೂವತ್ತು ಸಾವಿರ ರೂಪಾಯಿ ಮೌಲ್ಯದ 15ಗ್ರಾಂದ ಚಿನ್ನದ ಸರವನ್ನ ದೋಚಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.