ಹುಬ್ಬಳ್ಳಿ ಸಿಬಿಟಿಯಲ್ಲಿ ಅಂಗಡಿ- ಮಾಲ್ ಮಾಡಬೇಕಾ: ಹಾಗಾದ್ರೇ ಇಲ್ಲಿದೆ ನೋಡಿ ಅವಕಾಶ
ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಸಿಬಿಟಿಯಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ವ್ಯಾಪಾರ-ವಹಿವಾಟು ಮಾಡಲು ಅವಕಾಶ ನೀಡಲು ಇಲಾಖೆ ಮುಂದಾಗಿದೆ.
ಹುಬ್ಬಳ್ಳಿಯ ಪ್ರಮುಖ ಸ್ಥಳವಾದ ಸಿಬಿಟಿಯಲ್ಲೇ ಕಟ್ಟಡವಿದ್ದು, ಮಾಲ್, ರೆಸ್ಟೋರೆಂಟ್, ತರಬೇತಿ ಕೇಂದ್ರಗಳು, ಸಗಟು/ಚಿಲ್ಲರೇ ವ್ಯಾಪಾರ ನಡೆಸುವವರಿಗೆ ಅವಕಾಶವನ್ನ ಬಳಕೆ ಮಾಡಿಕೊಳ್ಳಿ ಎಂದು ಇಲಾಖೆ ಮನವಿ ಮಾಡಿಕೊಂಡಿದೆ.
ಈ ಬಗ್ಗೆ ಈ ಟೆಂಡರ್ ಕರೆಯಲಾಗಿದ್ದು, ಅರ್ಜಿಯನ್ನ ಸಲ್ಲಿಸಲು ಅಕ್ಟೋಬರ್ 12ರವರೆಗೆ ಅವಕಾಶವನ್ನ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ WWW.eproc.karnataka.gov.in ಭೇಟಿ ನೀಡಬಹುದಾಗಿದೆ.
ಮಸ್ತ್ ಜಗಾ ಐತೀ ನೋಡ್ರೀ. ಈಗ್ಲೇ ತಯಾರಾಗಿ..