ಹುಬ್ಬಳ್ಳಿಯ ಬಿವಿಬಿ ಬಳಿ ಹೊತ್ತಿ ಉರಿದ ಕಾರು… ಆತಂಕದಲ್ಲಿ ದಾರಿ ಹೋಕರು…!!!
ಹುಬ್ಬಳ್ಳಿ: ತಾಂತ್ರಿಕ ದೋಷದಿಂದ ಕಾರಿಗೆ ಬೆಂಕಿ ತಗುಲಿದ ಘಟನೆ ಈಗಷ್ಟೇ ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜಿನ ಮುಂಭಾಗ ನಡೆದಿದ್ದು, ದಾರಿಹೋಕರು ಆತಂಕದಿಂದ ದೂರ ಹೋಗಿದ್ದಾರೆ.
ಸಿಗ್ನಲ್ ಬಳಿಯೇ ಘಟನೆ ನಡೆದಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯಾದಿಂದ ಪಾರಾಗಿದ್ದು, ಘಟನಾ ಸ್ಥಳದಲ್ಲಿನ ವೀಡಿಯೋ ಇಲ್ಲಿದೆ ನೋಡಿ.
ಸುಮಾರು ಹೊತ್ತಿನ ನಂತರ ಅಗ್ನಿಶಾಮಕ ದಳದ ಸಿಬ್ವಂದಿಗಳು ಸ್ಥಳಕ್ಕೆ ಆಗಮಿಸಿ, ಹೊತ್ತಿದ ಕಾರಿನ ಬೆಂಕಿಯನ್ನ ನಂದಿಸಲು ಯತ್ನಿಸುತ್ತಿದ್ದಾರೆ.
