“ಬೆತ್ತಲೆ ಬಡಿತ” ಪ್ರಕರಣ- 10ಕ್ಕೇರಿದ ಬಂಧಿತರ ಸಂಖ್ಯೆ…
1 min readಹುಬ್ಬಳ್ಳಿಯ ಸೆಟ್ಲಮೆಂಟ್ ಪ್ರದೇಶದಲ್ಲಿ ನಡೆದಿದ್ದ ಪ್ರಕರಣ
ಮೂರ್ನಾಲ್ಕು ತಿಂಗಳ ಹಿಂದಿನ ವೀಡಿಯೋ
ಪೊಲೀಸರ ನಿರಂತರ ಕಾರ್ಯಾಚರಣೆ
ಹುಬ್ಬಳ್ಳಿ: ಯುವಕನನ್ನ ಕರೆತಂದು ಬೆತ್ತಲೆಗೊಳಿಸಿ ಹಿಗ್ಗಾ-ಮುಗ್ಗಾ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಠಾಣೆಯ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದು, ಬಂಧಿತರ ಸಂಖ್ಯೆ ಹತ್ತಕೇರಿದೆ.
ಸಂದೀಪ ಸಾಳುಂಕೆ ಎಂಬ ಯುವಕನೇ ಹಲ್ಲೆಗೊಳಗಾಗಿದ್ದ. ಆತನು ಯಾವುದೇ ದೂರು ನೀಡಿರಲಿಲ್ಲ. ಆದರೆ, ಇತ್ತೀಚೆಗೆ ಹಲ್ಲೆ ಮಾಡಿದ ವೀಡಿಯೋ ವೈರಲ್ ಆಗಿತ್ತು.
ವೈರಲ್ ಆಗಿರೋ ವೀಡಿಯೋ…
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಕಮೀಷನರ್ ಸಂತೋಷಬಾಬು ಅವರು ದಕ್ಷ ಪೊಲೀಸ್ ಇನ್ಸಪೆಕ್ಟರ್ ಜಯಪಾಲ ಪಾಟೀಲ ಅವರನ್ನ ಬೆಂಡಿಗೇರಿ ಠಾಣೆಗೆ ಪ್ರಭಾರಿಯಾಗಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಇನ್ಸಪೆಕ್ಟರ್ ಪಾಟೀಲ ಅವರು ಹತ್ತು ಜನರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ವೀಡಿಯೋ ಲಿಂಕ್..
https://fb.watch/lQnZjgPkJw/?mibextid=Nif5oz
ಹಲ್ಲೆಗೊಳಗಾಗಿದ್ದ ಸಂದೀಪ ಸಾಳುಂಕೆ ಕೂಡಾ ಪೋಕ್ಸೊ ಪ್ರಕರಣದಲ್ಲಿ ಆಪಾದಿತನಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಈತ ಕೂಡ ಹಲವು ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ಹೋಗಿ ಬಂದವನಾಗಿದ್ದಾನೆಂದು ಗೊತ್ತಾಗಿದೆ.