Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ತಪ್ಪಿದ “ದೊಡ್ಡದುರಂತ”- ಬದುಕುಳಿದ ಹಲವರು…

1 min read
Spread the love

ಹುಬ್ಬಳ್ಳಿ: ನಗರದ ಕ್ಲಬ್ ರಸ್ತೆಯಲ್ಲಿ ನಡೆಯುತ್ತಿರುವ ಮೇಲುಸೇತುವೆ ನಿರ್ಮಾಣದ ಕಾಮಗಾರಿಯ ಸಮಯದಲ್ಲಿ ಅವಘಡ ನಡೆದಿದ್ದು, ಸ್ಕೂಟಿ, ಅಂಗಡಿ ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮೇಲುಸೇತುವೆ ನಿರ್ಮಾಣದ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಹಿಟಾಚಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅದರಡಿ ಸಿಲುಕಿದ ಸ್ಕೂಟಿ ಸಂಪೂರ್ಣವಾಗಿ ಜಖಂಗೊಂಡಿದೆ.

ಹಿಟಾಚಿಯ ಮುಂದಿನ ಭಾಗ ಎದುರಿಗಿದ್ದ ಅಂಗಡಿಯ ಮೇಲೆ ಹೋಗಿ ಬಿದ್ದಿದ್ದು, ಕಟ್ಟಡಕ್ಕೂ ದಕ್ಕೆಯಾಗಿದೆ. ಇದು ಬೀಳುತ್ತಿದ್ದ ಹಾಗೇ ಕೆಲವರು ಓಡಿ ಹೋಗಿ ಪ್ರಾಣವನ್ನ ಉಳಿಸಿಕೊಂಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕ್ರಮವನ್ನ ಜರುಗಿಸಿದ್ದಾರೆ.

 


Spread the love

Leave a Reply

Your email address will not be published. Required fields are marked *