ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ತಿರಂಗಾ ಯಾತ್ರೆಯಲ್ಲಿ “ಜೋಡೆತ್ತುಗಳ ಖದರ್”…
1 min readಹುಬ್ಬಳ್ಳಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೆಂಟ್ರಲ್ ಕ್ಷೇತ್ರದ ವತಿಯಿಂದ ಸಡಗರದ ತಿರಂಗಾ ಯಾತ್ರೆ ವಿದ್ಯಾನಗರದಿಂದ ಕಿಮ್ಸ್ ಮುಂಭಾಗದವರೆಗೂ ನಡೆದಿದ್ದು, ಬಿಜೆಪಿಯ ಜೋಡೆತ್ತುಗಳ ಖದರ್ ಎಲ್ಲರ ಗಮನ ಸೆಳೆಯಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಜೋಶ್ ಮೂಡಿಸಿದಾಗಲೂ, ಮಾಜಿ ಸಿಎಂ ಜಗದೀಶ ಶೆಟ್ಟರ ಅಭಿಮಾನದಿಂದ ಮಾತನಾಡಿದಾಗಲೂ, ಬಿಜೆಪಿಯ ಜೋಡೆತ್ತುಗಳಾದ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಬಿಜೆಪಿ ಮುಖಂಡ ಮಹೇಂದ್ರ ಕೌತಾಳ, ತಿರಂಗಾ ಯಾತ್ರೆಯಲ್ಲಿ ಎಲ್ಲರ ಗಮನ ಸೆಳೆದರು.
75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ತಿರಂಗಾ ಯಾತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಪ್ರಭಾರಿಗ ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ಮಲ್ಲಿಕಾರ್ಜುನ ಸಾಹುಕಾರ, ತಿರಂಗಾ ಯಾತ್ರೆಯ ಸಂಚಾಲಕ ಮಹೇಂದ್ರ ಕೌತಾಳ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ತಿಪ್ಪಣ್ಣ ಮಜ್ಜಿಗಿ, ದತ್ತಮೂರ್ತಿ ಕುಲಕರ್ಣಿ, ನಾಗೇಶ ಕಲಬುರ್ಗಿ, ಗೋಪಾಲ ಬದ್ದಿ, ವಿರೂಪಾಕ್ಷ ರಾಯನಗೌಡ್ರ, ಅಶೋಕ ವಾಲ್ಮೀಕಿ, ರವಿ ನಾಯಕ, ರಾಮನಾಥ್ ಶೇಣಯ, ಅವಿನಾಶ ಹರಿವಾಣ, ಕಾಲೇಜಿನ ವಿದ್ಯಾರ್ಥಿ, ವಿಧ್ಯಾರ್ಥಿನಿಯರು, ಆಡಳಿತ ಮಂಡಳಿಯ ಸದಸ್ಯರು, ಸಾಮಾಜಿಕ ಕಾರ್ಯಕರ್ತರು, ರಾಷ್ಟ್ರ ಪ್ರೇಮಿಗಳು, ಪಕ್ಷದ ಮುಖಂಡರು ಕಾರ್ಯಕರ್ತರು, ಭಾಗವಹಿಸಿದ್ದರು.