ಜಗದೀಶ ಶೆಟ್ಟರವರೇ, ನಿಮ್ಮ ಹಿಂದೆ-ಮುಂದೆ ಇರೋರಿಗೆ ಕಾನೂನು ಇಲ್ವಾ: ಪ್ರಶ್ನಿಸಿದ್ದು ಯಾರೂ ಗೊತ್ತಾ…!
1 min readಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಧಾರವಾಡ ಜಿಲ್ಲೆಯ ನಾಯಕರಿಗೆ ರಾಜ್ಯ ಸರಕಾರದ ಯಾವುದೇ ಕಾನೂನುಗಳು ಅನ್ವಯವಾಗುವುದಿಲ್ಲವೇ. ಅವರು ಏನೂ ಮಾಡಿದರೂ ನಡೀಯತ್ತಾ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರೇ, ನಿಮ್ಮ ಸುತ್ತಲಿನ ಪಟಾಲಂಗೆ ಬುದ್ಧಿ ಹೇಳೋರು ಯಾರೂ ಎಂದು ನೂತನವಾಗಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾಗಿರುವ ರಜತ ಉಳ್ಳಾಗಡ್ಡಿಮಠ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ರಜತ ಉಳ್ಳಾಗಡ್ಡಿಮಠ ಅವರು, ಬಿಜೆಪಿಯ ಪ್ರಮುಖರಾಗಿರುವ ಮಲ್ಲಿಕಾರ್ಜುನ ಸಾವುಕಾರ, ಕೊರೋನಾ ನಿಯಮಗಳನ್ನ ಮೀರಿ ತಮ್ಮ ಮದುವೆಯ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಇದು ನಿಮಗೆ ಗೊತ್ತಾ.. ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸೆಂಟ್ರಲ್ ಕ್ಷೇತ್ರದ ಸಂತೋಷ ಚವ್ಹಾಣ ಮಾಸ್ಕ್ ಹಾಕಿಕೊಳ್ಳದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ನಿಮ್ಮದೇ ಪಕ್ಷದ ಹುಡಾ ಅಧ್ಯಕ್ಷ ನಾಗೋಸಾ ಕಲಬುರಗಿ ಕೂಡಾ, ಕೊರೋನಾ ನಿಯಮಗಳನ್ನ ಮೀರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದೇಲ್ಲವೂ ನಿಮಗೆ ಕಾಣದೇ ನಡೆಯತ್ತಾ..
ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ನಿಮ್ಮ ಪಕ್ಷದವರ ಸಡಗರಗಳು, ಸಂಭ್ರಮಗಳು ಮತ್ತೂ ನಿಯಮ ಉಲ್ಲಂಘನೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ನೀವೂ ಕ್ರಮ ತೆಗೆದುಕೊಳ್ಳಲು ಡಿಸಿಯವರಿಗೆ ಸೂಚನೆ ಕೊಡ್ತೀರಾ. ಅಥವಾ, ಇಂತಹ ಆಟಾಟೋಪಗಳು ಬಿಜೆಪಿಯಲ್ಲಿ ಸಹಜವೆಂದು ಸುಮ್ಮನಾಗಿತ್ತಿರೋ ಎಂದು ರಜತ ಪ್ರಶ್ನಿಸಿದ್ದಾರೆ.