ಶ್ಯಾಮ ಜಾಧವ ಮತ್ತು ಅಭಿಷೇಕ V/S ಫಿಲೋಮಿನ್ ಪೌಲ್ ಮತ್ತು ಸುಂದರ : ಹುಬ್ಬಳ್ಳಿಯ ಎರಡು ಠಾಣೆಗಳಲ್ಲಿ FIR…
1 min readಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಹಲವರ ನಡುವೆ ಒಂದಿಲ್ಲಾ ಒಂದು ರೀತಿಯ ‘ಗ್ಯಾಂಗ್‌ವಾರ್’ ಆಗುವ ಸಂದರ್ಭಗಳು ಸದ್ದಿಲ್ಲದೇ ನಡೆಯುತ್ತಿವೇಯಾ ಎಂದು ಸಂಶಯಕ್ಕೆ ಎರಡು ಠಾಣೆಗಳಲ್ಲಿ ಆಗಿರುವ ಎಫ್‌ಐಆರ್‌ಗಳು ಸಾಕ್ಷಿ ನುಡಿಯುತ್ತಿದ್ದು, ಇಲಾಖೆಯ ಕ್ರಮ ಏನು ಎಂಬುದನ್ನ ಸಾರ್ವಜನಿಕರ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಹೌದು… ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಫಿಲೋಮಿನ್ ಪೌಲ್ ಪುತ್ರ ಸುಂದರ ಪೌಲ್ ದೂರು ನೀಡಿದ ಹಿನ್ನೆಲೆಯಲ್ಲಿ ಶ್ಯಾಮ ಜಾಧವ, ಅಭಿಷೇಕ ಜಾಧವ, ಮನೋಜ ಕುಳಗೇರಿ ಹಾಗೂ ದರ್ಶನ ಖೋದಾನಪುರ ಮೇಲೆ ಎಫ್‌ಐಆರ್ ದಾಖಲಾಗಿದೆ.
ತಮ್ಮ ತಂದೆ ಹಾಗೂ ನನ್ನ ಕೊಲೆ ಮಾಡುವ ಬೆದರಿಕೆ ಹಾಕಿದ್ದಲ್ಲದೇ ತಾವಿದ್ದ ಜಾಗದ ಮಾಹಿತಿಯನ್ನ ಪಡೆಯಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದರಿಂದ ವಿದ್ಯಾನಗರ ಠಾಣೆಯಲ್ಲಿ IPC 1860 (U/s- 120B, 363, 511, 506, 34) ರ ಅಡಿಯಲ್ಲಿ fir ದಾಖಲು ಮಾಡಲಾಗಿದೆ.
ಇನ್ನೂ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅಭಿಷೇಕ ಜಾಧವ ದೂರು ನೀಡಿದ್ದು, ಸುಂದರ ಪೌಲ್, ಫಿಲೋಮಿನ್ ಪೌಲ್, ಚಂದ್ರ ಪೌಲ್ ಹಾಗೂ ಇನ್ನಿತರ ಎಂಟು ಜನರ ಮೇಲೆ FIR ದಾಖಲಾಗಿದೆ.
ಕೊಲೆ ಮಾಡುವ ಉದ್ದೇಶದಿಂದ ಒಳಸಂಚು ರೂಪಿಸಲಾಗಿತ್ತೆಂದು ಅಭಿಷೇಕ ಜಾಧವ ದೂರು ನೀಡಿದ್ದರಿಂದ IPC 1860 (U/s- 109, 120B, 504, 506, 149)ರ ಅಡಿಯಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಎರಡು ಕಡೆಯಿಂದಲೂ ಕೊಲೆಯ ರಹಸ್ಯಗಳು ಬಯಲಾಗಿದ್ದು, ಎರಡು ಠಾಣೆಯ ಪೊಲೀಸರು ಆರೋಪಿಗಳನ್ನ ಬಂಧಿಸುತ್ತಾರಾ ಅಥವಾ ಇಲ್ಲವೋ ಎಂಬುದೀಗ ಯಕ್ಷಪ್ರಶ್ನೆಯಾಗಿದೆ.