ಹೊಡಿಮಗಾ… ಹೊಡಿಮಗಾ.. ಬಿಡಬೇಡಾ ಅವ್ನಾ…: ಹುಬ್ಬಳ್ಳಿಯ ಎಕ್ಸಕ್ಲೂಸಿವ್ ವೀಡಿಯೋ…!
1 min readಹುಬ್ಬಳ್ಳಿ: ಕೊರೋನಾ ಲಾಕ್ ಡೌನ್ ಇದ್ದರೂ ಕೂಡಾ ಹುಬ್ಬಳ್ಳಿಯ ಪುಂಡ ಪೋಕರಿಗಳ ದಾಂಧಲೆಗಳು ಮಾತ್ರ ಕಡಿಮೆಯಾಗುತ್ತಲೇ ಇಲ್ಲ. ಕಂಡ ಕಂಡಲ್ಲಿ ಗೂಂಡಾಗಳ ರೀತಿಯಲ್ಲಿ ವರ್ತನೆ ಮಾಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ಘಟನೆಯ ವೀಡಿಯೋ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಹೇಗಿದೆ ನೋಡಿ ಬಡಿದಾಟ..
ಭರತ ಎಂಬಾತ ತನ್ನ ಗೆಳೆಯನನ್ನೇ ಹಿಗ್ಗಾ-ಮುಗ್ಗಾ ಥಳಿಸಿದ್ದಾನೆ. ಈತ ಈಗಾಗಲೇ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ‘ಸ್ಲೇಟ್” ಹಿಡಿದು ಪರಿಚಿತನಂತೆ. ಆದರೂ, ಈತನ ಆಟಾಟೋಪ ನಿಂತಿಲ್ಲ.
ಪೊಲೀಸರು ಇಂತವರಿಗೆ ತಕ್ಕ ಪಾಠ ಕಲಿಸಬೇಕಿದೆ. ಇಲ್ಲದಿದ್ದರೇ, ಮತ್ತಷ್ಟು ಜನರಿಗೆ ಮಾರಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.