ಹುಬ್ಬಳ್ಳಿಯ ಮಹಾದುರಂತ- 8ನೇ ಮಾಲಾಧಾರಿಯೂ ಬದುಕುಳಿಯಲಿಲ್ಲ….!!!!
1 min readಹುಬ್ಬಳ್ಳಿ: ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಸಿಲಿಂಡರ್ ಸೋರಿಕೆಯ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
42 ವರ್ಷದ ಪ್ರಕಾಶ ಬಾರಕೇರ ಎಂಬುವವರೇ ಸಾವಿಗೀಡಾದ ಮಾಲಾಧಾರಿ. ಈ ಮೂಲಕ ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಎಂಟಕ್ಕೇರಿದೆ.
ಕಳೆದ ವಾರದಲ್ಲಿ ನಡೆದ ಈ ಘಟನೆ ಅವಳಿನಗರದಲ್ಲಿ ನಡೆದ ಬಹುದೊಡ್ಡ ದುರಂತವಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.