ಹುಬ್ಬಳ್ಳಿ ಪ್ಲೈಓವರ್: ಚಿಂತಾಜನಕ ಸ್ಥಿತಿಯಲ್ಲಿದ್ದ ASI ನಾಭಿರಾಜ್ ಸಾವು…!!!

ಪ್ಲೈ ಓವರ್ ಬ್ರೀಡ್ಜ್ ಕಾಮಗಾರಿ ಬ್ರೀಡ್ಜ್ ಕೆಳಗೆ ರಾಡ್ ಬಿದ್ದು ಗಾಯಗೊಂಡಿದ್ದ ASI ನಾಭಿರಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವು
ಹುಬ್ಬಳ್ಳಿ: ಪ್ಲೈ ಓವರ್ ಬ್ರೀಡ್ಜ್ ಕಾಮಗಾರಿ ವೇಳೆಯಲ್ಲಿ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎ ಎಸ್ ಐ ನಾಬೀರಾಜ್ ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ 3.45 ಕ್ಕೇ ಸಾವನಪ್ಪಿದ್ದಾರೆ.
ಕಳೆದ ಮಂಗಳವಾರ ಸಾಯಂಕಾಲ ಕರ್ತವ್ಯಕ್ಕೆ ಬೈಕ್ ಮೇಲೆ ತೆರಳುತ್ತಿದ್ದ ನಾಬೀರಾಜ್ ಅವರ ತಲೆಯ ಮೇಲೆ ಹಳೇ ಕೋರ್ಟ್ ಸರ್ಕಲ್ ಬಳಿಯಲ್ಲಿ ನಡೆಯುತ್ತಿದ್ದ ಪ್ಲೈ ಓವರ್ ಬ್ರೀಡ್ಜ್ ಕಾಮಗಾರಿಯ ಕಬ್ಬಿಣದ ರಾಡ್ ತಲೆಯ ಮೇಲೆ ಬಿದ್ದಿತ್ತು.ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದ್ರೆ ತಲೆಗೆ ಬಲವಾದ ಏಟು ಬಿದ್ದ ಕಾರಣ ಕೋಮಾಗೆ ಜಾರಿದ್ದ ನಾಬೀರಾಜ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದರು.ಗುತ್ತಿಗೆದಾರರ ನಿರ್ಲಕ್ಷದಿಂದ ಈ ಅವಘಡ ಸಂಭವಿಸಿದ ಹಿನ್ನೆಲೆ 15 ಜನರ ವಿರುದ್ದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು