ಹುಬ್ಬಳ್ಳಿ ಗೋಕುಲ ಠಾಣೆಯ ಎಎಸ್ಐ ಸಾವು…

ಹುಬ್ಬಳ್ಳಿ: ಗೋಕುಲ ರಸ್ತೆ ಪೊಲೀಸ್ ಠಾಣೆಯ ಎಎಸ್ಐವೊಬ್ಬರು ತೀವ್ರ ಅನಾರೋಗ್ಯದಿಂದ ಸಾವಿಗೀಡಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಬಸವರಾಜ ಜಾಡರ ಎಂಬ ಎಎಸ್ಐ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಮೃತ ಬಸವರಾಜ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದು, ಓರ್ವರ ಮದುವೆಯಾಗಿದ್ದು, ಮತ್ತೋರ್ವರು ಶಿಕ್ಷಣ ಪಡೆಯುತ್ತಿದ್ದಾರೆ. ಓರ್ವ ಗಂಡು ಮಗ ಕೂಡಾ ಈ ಹಿಂದೆ ಸಾವನ್ನಪ್ಪಿದ್ದಾರೆ.