Posts Slider

Karnataka Voice

Latest Kannada News

ಹುಬ್ಬಳ್ಳಿ: ಪ್ರಸಾದವೆಂದು ಕೊಟ್ಟು “ಮತ್ತು” ಬರಿಸಿ ಹಣ ಲೂಟಿ…

1 min read
Spread the love

ಹುಬ್ಬಳ್ಳಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ವಿಳಾಸ ತೋರಿಸುವಂತೆ ಬೈಕಿನಲ್ಲಿ ಕೂಡಿಸಿಕೊಂಡು ಹೋಗಿ, ಪ್ರಸಾದವೆಂದು ಮತ್ತು ಬರುವ ಹಾಗೇ ಹಣ ಲೂಟಿ ಮಾಡಿರುವ ಘಟನೆ ಹುಬ್ಬಳ್ಳಿಯ ಕಾರಾಗೃಹದ ಬಳಿ ನಡೆದಿದೆ.

ಉಣಕಲ್ ಮೂಲದ ಮಂಜುನಾಥ ಸುರೇಶ ಬೆಳವಡಿ ಎಂಬಾತನಿಗೆ ಮೋಸ ಮಾಡಲಾಗಿದೆ. ಅಶೋಕನಗರದಿಂದ ಉಣಕಲ್‌ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಬೈಕಿನಲ್ಲಿ ಬಂದ ಇಬ್ಬರು ‘ಜೈಲು ಎಲ್ಲಿ ಬರತ್ತೆ’ ಎಂದು ವಿಳಾಸ ಕೇಳಿ, ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ತದನಂತರ ಮೋಸ ಮಾಡಿದ್ದಾರೆ.

ಸುಮಾರು ಐದೂವರೆ ಅಡಿ ಎತ್ತರದ ಅವರು ಸಾಧಾರಣ ಮೈಕಟ್ಟು ಹೊಂದಿದ್ದು, ಮರೂನ್ ಬಣ್ಣದ ಪ್ಯಾಂಟ್ ಹಾಗೂ ಕ್ರೀಂ ಕಲರ್ ಶರ್ಟ್ ಹಾಕಿಕೊಂಡಿದ್ದರೆಂದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed