“ಮಂಗಳಸೂತ್ರ”-ಮೊಬೈಲ್ ಕಳ್ಳನ ಬಂಧಿಸಿದ ಹುಬ್ಬಳ್ಳಿ ಪೊಲೀಸರು..!


ಹುಬ್ಬಳ್ಳಿ: ಸಾರಿಗೆ ಬಸ್ ಹಾಗೂ ನಿಂತ ಕಾರಿನಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ ನರಸೇರಾಮಪೇಟಾ ತಾಲೂಕಿನ ಸಂತಮಾಗಳೂರು ಗ್ರಾಮದ ಶ್ಯಾಮ ವೆಂಕಟೇಶ್ವರಲು ಮೇಡ್ ಎಂಬ 23 ವರ್ಷದ ಆರೋಪಿಯನ್ನ ಬಂಧನ ಮಾಡಲಾಗಿದೆ.
ಬಂಧಿತ ಆರೋಪಿಯಿಂದ 1ಲಕ್ಷ 80 ಸಾವಿರ ಮೌಲ್ಯದ 40 ಗ್ರಾಂ ಚಿನ್ನದ ಮಂಗಳಸೂತ್ರ ಹಾಗೂ 15 ಸಾವಿರ ಮೌಲ್ಯದ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಬೈಕ್ ನ್ನೂ ವಶಕ್ಕೆ ಪಡೆಯಲಾಗಿದೆ.
ಡಿಸಿಪಿಗಳಾದ ಕೆ.ರಾಮರಾಜನ್ ಹಾಗೂ ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ರವಿಚಂದ್ರ ಬಡಪಕ್ಕೀರಪ್ಪನವರ, ಪಿಎಸ್ಐ ಸೀತಾರಾಮ್ ಲಮಾಣಿ, ಸಿಬ್ಬಂದಿಗಳಾದ ಕೆ.ಎನ್.ನೆಲಗುಡ್ಡ, ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಉಮೇಶ ಹೆದ್ದೇರಿ, ರವಿ ಹೊಸಮನಿ, ರೇಣು ಸಿಕ್ಕಲಗೇರ, ಮಾಲತೇಶ ಮರಿನಾಯ್ಕರ, ಕುಮಾರ ಬಾಗವಾಡ, ಮಾಬುಸಾಬ ಮುಲ್ಲಾ, ಮಂಜು ಕಮತದ ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.