ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಒಡನಾಡಿ ಬಿಜೆಪಿ ಮುಖಂಡ ಬಂಧನ

ಹುಬ್ಬಳ್ಳಿ: ತನ್ನ ಸೋದರಮಾವನ ಹೆಸರಿನಲ್ಲಿ ನಕಲಿ ಬಾಂಡ್ ಸೃಷ್ಟಿ ಮಾಡಿ, ಮಾವನ ಮಕ್ಕಳಿಗೆ ಭಾರತೀಯ ಜನತಾ ಪಕ್ಷದ ಮುಖಂಡನೋರ್ವ ತೊಂದರೆ ಕೊಡುತ್ತಿದ್ದಾನೆಂದು ಆರೋಪಿಸಿ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಳಿಯಂದಿರುವ ದೂರು ನೀಡಿದ ಬೆನ್ನಲ್ಲೇ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸೆಂಟ್ರಲ್ ಕ್ಷೇತ್ರದ ಮುಖಂಡರೊಂದಿಗೆ ಸಂಪರ್ಕ ಹೊಂದಿರುವ ಸಂಗಮೇಶ ಗೌರಕ್ಕನವರ ಎಂಬ ಬಿಜೆಪಿ ಮುಖಂಡ, ಗಂಗಾಧರ ವಾಲಿ ಎಂಬುವವರ ಕುಟುಂಬಕ್ಕೆ ಅನ್ಯಾಯ ಮಾಡಿ, 17 ಲಕ್ಷ 68 ಸಾವಿರ ಕೊಡುವಂತೆ ಪೀಡಿಸುತ್ತಿದ್ದಾನೆಂದು ಮೃತ ಗಂಗಾಧರ ವಾಲಿ ಅವರ ಪುತ್ರ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.
ಗಂಗಾಧರ ವಾಲಿಯವರು ತೀರಿಕೊಳ್ಳುವ ಮುನ್ನವೇ ಬಾಂಡವೊಂದನ್ನ ಮಾಡಿಕೊಂಡಿದ್ದು, ಅದರಲ್ಲಿ 10 ಲಕ್ಷ ರೂಪಾಯಿ ಕೈಗಡ ಎಂದು ಬರೆಯಲಾಗಿದೆ. ಒಂದು ವರ್ಷದಲ್ಲಿ ಅದರ ಬಡ್ಡಿ ಸಮೇತ 17 ಲಕ್ಷಕ್ಕೂ ಹೆಚ್ಚು ಹಣವನ್ನ ಕೊಡುವಂತೆ ಪೀಡಿಸುತ್ತಿರುವುದರಿಂದ ಪ್ರಕರಣ ಬೆಳಕಿಗೆ ಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧನ ಮಾಡಿರುವ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.