ನವನಗರ ಎಪಿಎಂಸಿ ಠಾಣೆಗೆ ಕೊನೆಗೂ ಬಂದ್ರು “ಇನ್ಸಪೆಕ್ಟರ್ ಬಾಳಪ್ಪ ಮಂಟೂರ”…

ಹುಬ್ಬಳ್ಳಿ: ಹಲವು ವಿವಾದಗಳಿಗೆ ಕಾರಣವಾಗುವ ನವನಗರದ ಎಪಿಎಂಸಿ ಪೊಲೀಸ್ ಠಾಣೆಗೆ ಕೊನೆಗೂ ಇನ್ಸಪೆಕ್ಟರ್ ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ವಾರವೇ ಸರಕಾರದ ಆದೇಶವಾಗಿದ್ದರೂ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಠಾಣೆಗೆ ಬಂದು ಹಾಜರಾಗಿರಲಿಲ್ಲ. ಕೆಲವರ ಪ್ರಕಾರ ಇವರು ಠಾಣೆಗೆ ಬರೋದಿಲ್ಲವೆಂದು ಹೇಳಲಾಗಿತ್ತು. ಆದರೆ, ಇಂದು ಆಗಮಿಸಿ ಅಧಿಕಾರವನ್ನ ಸ್ವೀಕರಿಸಿದರು.

ನವನಗರದ ಎಪಿಎಂಸಿ ಪೊಲೀಸ್ ಠಾಣೆ ಒಂದಿಲ್ಲಾ ಒಂದು ರಗಳೆಯನ್ನ ಎದುರಿಸುತ್ತಲೇ ಬಂದಿದೆ. ಪ್ರಭು ಸೂರಿನ್ ಇನ್ಸಪೆಕ್ಟರ್ ಇದ್ದಾಗ, ವಕೀಲರನ್ನ ಅರೆಸ್ಟ್ ಮಾಡಿದ ಪ್ರಕರಣ ಹಲವು ತಿರುವುಗಳನ್ನ ಪಡೆದಿತ್ತು.
ಇದಾದ ಮೇಲೆ ಇನ್ಸಪೆಕ್ಟರ್ ಚೌಗಲೆ ಗಾಂಜಾ ಕೇಸಿನಲ್ಲಿ ಅಮಾನತ್ತು ಆಗಬೇಕಾಯಿತು. ಚೌಗಲೆ ಅವರು ಹೋದ ನಂತರ ಎಪಿಎಂಸಿ ಪೊಲೀಸ್ ಠಾಣೆಗೆ ಖಾಯಂ ಇನ್ಸಪೆಕ್ಟರ್ ಇರಲೇ ಇಲ್ಲಾ.