ಶೆಟ್ಟರ ನಿವಾಸದ ಕೂಗಳತೆ ದೂರದಲ್ಲೇ ದುರಂತ: ಐದನೇಯ ಮಹಡಿಯಿಂದ ಬಿದ್ದವ ಹೊರಟು ನಿಂತ…
ಹುಬ್ಬಳ್ಳಿ: ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ನಿವಾಸದ ಕೂಗಳತೆ ದೂರದಲ್ಲಿರೋ ಬಹುಮಹಡಿ ಕಟ್ಟಟವೊಂದರ ಐದನೇಯ ಪ್ಲೋರನಿಂದ ವ್ಯಕ್ತಿಯೊಬ್ಬ ಬಿದ್ದು ಸಾವಿಗೀಡಾದ ಘಟನೆ ಮಿಡ್ ಮ್ಯಾಕ್ ಲೇಔಟ್ ಬಳಿ ಸಂಭವಿಸಿದೆ.
ಮಂಟೂರ ರಸ್ತೆಯ ನಿವಾಸಿಯಾದ ಪೋತಯ್ಯ ರೊಡ್ಡ ಎಂಬಾತನೇ ಐದನೇಯ ಮಹಡಿಯಿಂದ ಬಿದ್ದು ಪ್ರಾಣವನ್ನ ಕಳೆದುಕೊಂಡಿದ್ದಾನೆ. ನರೇಂದ್ರ ಹೆಸರಿನ ಬಹುಮಹಡಿ ಅಪಾರ್ಟಮೆಂಟಿನ ಬಣ್ಣವನ್ನೂ ಬಳಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ.
ಅತಿಯಾದ ಎತ್ತರದಿಂದ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ 35 ವರ್ಷದ ಪೋತಯ್ಯ ಮೃತಪಟ್ಟಿದ್ದಾನೆ. ಹಲವು ತಿಂಗಳಿಂದ ನಿರಂತರವಾಗಿ ಬಣ್ಣ ಬಳಿಯುತ್ತಿದ್ದನೆಂದು ಗೊತ್ತಾಗಿದೆ.
ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.