ಹುಬ್ಬಳ್ಳಿ-ಅಂಕೋಲಾ ಮಧ್ಯ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್
ಹುಬ್ಬಳ್ಳಿ: ಅಂಕೋಲಾ-ಹುಬ್ಬಳ್ಳಿಯ ರಸ್ತೆ ಮಧ್ಯದಲ್ಲಿ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ಸೊಂದು ಡಿಕ್ಕಿಹೊಡೆದ ಪರಿಣಾಮವಾಗಿ ಚಾಲಕನಿಗೆ ತೀವ್ರವಾದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ.
ಹುಬ್ಬಳ್ಳಿ ಸೋನಿಯಾ ಗಾಂಧಿನಗರದ ನಿವಾಸಿ ಮೈನುದ್ದೀನಸಾಬ, ಆನಂದ ಟ್ರಾವೆಲ್ಸ್ ಬಸ್ ನಲ್ಲಿ ಹಲವು ವರ್ಷಗಳಿಂದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಇಂದು ಬೇರೆ ಚಾಲಕನ ಕೈಯಲ್ಲಿ ವಾಹನವನ್ನು ಕೊಟ್ಟು ತಾನು ಮಲಗಿದ್ದಾಗ ಬೇರೆ ಚಾಲಕ ನಿಯಂತ್ರಣ ತಪ್ಪಿ ಲಾರಿಯ ಹಿಂಬದಿಗೆ ಗುದ್ದಿದ ಪರಿಣಾಮ , ಮೈನುದ್ದೀನ್ ಗೆ ಗಂಭೀರವಾದ ಗಾಯವಾಗಿದೆ.
ಸಧ್ಯ ಮೈನುದ್ದೀನ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಈತನ ಸ್ಥಿತಿ ಗಂಭೀರವಾಗಿದೆ. ಲಾರಿಯ ಹಿಂಬದಿಗೆ ವೇಗವಾಗಿ ಡಿಕ್ಕಿ ಹೊಡೆದಿದ್ದರಿಂದ ಬಸ್ ನ ಮುಂಭಾಗವೂ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯಲ್ಲಿ ಮಾಹಿತಿಯನ್ನ ಸಂಗ್ರಹ ಮಾಡಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.