ಹುಬ್ಬಳ್ಳಿಯಲ್ಲಿ ಸಿಕ್ಕ 11000 ಕಮ್ಮಿ ’90’ ಲಕ್ಷ ರೂಪಾಯಿ “ಸತೀಶ ಶೇಜವಾಡಕರದ್ದಂತೆ”- ಕಮೀಷನರ್ ಹೇಳಿದ್ದೇನು ಗೊತ್ತಾ…!?

ಹುಬ್ಬಳ್ಳಿ: ಯಾವುದೇ ದಾಖಲೆಗಳು ಇಲ್ಲದ ಅಂದಾಜು 90 ಲಕ್ಷ ರೂಪಾಯಿಗಳನ್ನ ಕೇಶ್ವಾಪುರ ಠಾಣೆ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮವನ್ನ ಜರುಗಿಸಿದ್ದಾರೆ.
ಹುಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ನಿವೃತ್ತ ನೌಕರರಾದ ಪಾಂಡುರಂಗಪ್ಪ, ಕಮಲಾ, ಬಾಲಕೃಷ್ಣ ಹಣವನ್ನ ಶಿವಮೊಗ್ಗದಿಂದ ತಂದಿದ್ರು.
ಹುಬ್ಬಳ್ಳಿ ಮೂಲದ ಸತೀಶ್ ಶೇಜವಾಡಕರ್ ಅವರಿಗೆ ಹಣ ಸೇರಿದ್ದು ಎಂದು ವಶಕ್ಕೆ ಪಡೆದವರು ಹೇಳಿದ್ದಾರೆ. ಹೀಗಾಗಿ ನಾಲ್ವರ ವಿರುದ್ದ ಕೇಸ್ ದಾಖಲು ಮಾಡಿಕೊಂಡು ತನಿಖೆ ಮಾಡಲಾಗುತ್ತಿದೆ.
ಪ್ರಾಪರ್ಟಿ ವಿಚಾರವಾಗಿ ಹಣ ಸಾಗಾಟ ಎಂದು ಹೇಳಿದ್ದಾರೆ. ಆದ್ರೆ, ಇದೊಂದು ಗಂಭೀರ ಪ್ರಕರಣ. ಹೀಗಾಗಿ ನಾವು ವಿಚಾರಣೆ ಮಾಡುತ್ತೇವೆ. IT ಅಧಿಕಾರಿಗಳಿಗೂ ಮಾಹಿತಿ ನೀಡುತ್ತೇವೆ ಎಂದು ಕಮೀಷನರ್ ಹೇಳಿದರು.