ಹುಬ್ಬಳ್ಳಿಯ ಅಮರಗೋಳದಲ್ಲಿ “ರಗಳೆ”- ನೊಂದವರು ಎಪಿಎಂಸಿ ಠಾಣೆಗೆ…!

ಹುಬ್ಬಳ್ಳಿ: ಎರಡು ಗ್ರಾಮಗಳ ಭಜನಾ ಮಂಡಳಿಗಳ ನಡುವೆ ಭಜನೆಗಳನ್ನ ಆಯೋಜನೆ ಮಾಡಿದ ಸಮಯದಲ್ಲಿ ಕೆಲವರು ಗೊಂದಲ ಸೃಷ್ಟಿ ಮಾಡಿದ್ದರಿಂದ, ಆಯೋಜನೆ ಮಾಡಿದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ದಸರಾ ಅಂಗವಾಗಿ ಪ್ರತಿ ವರ್ಷವೂ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಎಲ್ಲವೂ ಸರಿ ನಡೆದಾಗಲೇ ಕೆಲವರು ಬಂದು ಕಾರ್ಯಕ್ರಮ ಹದಗೆಡಿಸಿದ್ದಲ್ಲದೇ, ಅಸಹ್ಯವಾಗಿ ಮಾತನಾಡಿದ್ದಾರೆಂದು ಟ್ರಸ್ಟ್ ಕಮೀಟಿಯ ಕಲ್ಲಪ್ಪ ಬ್ಯಾಟಣ್ಣನವರ ವಿವರಿಸಿದ್ದಾರೆ.
ಭಜನೆ ಮೂಲಕ ಪ್ರತಿಭಟನೆ… ವೀಡಿಯೋ
ಘಟನೆಯ ಬಗ್ಗೆ ಪೊಲೀಸರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿರುವ ಸ್ಥಳೀಯರು, ನವನಗರದ ಎಪಿಎಂಸಿ ಪೊಲೀಸ್ ಠಾಣೆಗೆ ತೆರಳಿ, ಗೊಂದಲ ಸೃಷ್ಟಿಸಿದವರನ್ನ ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ.