Posts Slider

Karnataka Voice

Latest Kannada News

ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಅಪಾರ್ಟ್ ಮೆಂಟಿನಲ್ಲಿ ಬಿರುಕು: ಮನೆ ಬಿಟ್ಟು ಬೀದಿಗೆ ಬಂದ ನಿವಾಸಿಗಳು…!

Spread the love

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿನ ಅಕ್ಷಯ ಪಾರ್ಕಿನ ಅಪಾರ್ಟಮೆಂಟ್ ವೊಂದರ ಮನೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿವಾಸಿಗಳು ಆತಂಕದಿಂದ ಬೀದಿಗೆ ಬಂದಿರುವ ಘಟನೆ ನಡೆದಿದೆ.

ಅಕ್ಷಯಪಾರ್ಕ್ ಪ್ರದೇಶದಲ್ಲಿನ ನಾಲ್ಕು ಅಂತಸ್ತಿನ ಅಪಾರ್ಟ್ ಮೆಂಟಿನ ಸಿ ಬ್ಲಾಕಿನ ಮನೆಯೊಂದರಲ್ಲಿ ಬಿರುಕು ಬಿಟ್ಟಿದೆ. ಇದರಿಂದ ಆತಂಕ ಶುರುವಾಗಿದ್ದು, ಅಪಾರ್ಟ್ ಮೆಂಟ್ ಮಾಲೀಕನ ವಿರುದ್ಧ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.

ಅಪಾರ್ಟ್ ಮೆಂಟ್ ಬಾಡಿಗೆ ನೀಡಿರುವ ಮಾಲೀಕ ಬೇರೆ ಊರಲ್ಲಿ ವಾಸವಾಗಿದ್ದು, ಇಲ್ಲಿರುವ ಬಹುತೇಕ ಮನೆಗಳನ್ನ ಬಾಡಿಗೆ ನೀಡಿದ್ದಾರೆ. ಇಂದು ಬೆಳಿಗ್ಗೆ ಮನೆಯೊಂದರಲ್ಲಿ ಬಿರುಕು ಬಿಟ್ಟಿದ್ದೇ ಆವಾಂತರಕ್ಕೆ ಕಾರಣವಾಗಿದೆ.

ಅಪಾರ್ಟ್ ಮೆಂಟಿನ ನಿವಾಸಿಗಳು ಬೀದಿಗೆ ಬಂದು ತಮ್ಮ ನೋವನ್ನ ವ್ಯಕ್ತಪಡಿಸುತ್ತಿದ್ದು, ಗೋಕುಲ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *