ಹುಬ್ಬಳ್ಳಿಯಲ್ಲೇ ನಿರ್ಮಾಣವಾಗಲಿದೆ ಪ್ರತಿಷ್ಠಿತ ಏಮ್ಸ್ …!
1 min readನವದೆಹಲಿ: ದೇಶದ ಕೆಲವೆ ಭಾಗಗಳಲ್ಲಿರುವ ಪ್ರತಿಷ್ಠಿತ ಏಮ್ಸ್ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೇ ನಿರ್ಮಾಣವಾಗಲಿದ್ದು,ಕೇಂದ್ರ ಸರಕಾರ ಮಹತ್ವದ ನಿರ್ಧಾರವನ್ನ ಪ್ರಕಟಿಸಿದ್ದು, ಕಲಬುರಗಿಗೆ ಕೊಡುವ ವಿಚಾರವನ್ನ ಅಲ್ಲಗೆಳೆದಿದೆ.
ಆಲ್ ಇಂಡಿಯಾ ಇನ್ಸಿಟ್ಯುಟ್ ಆಪ್ ಮೆಡಿಕಲ್ ಸೈನ್ಸ್ (ಏಮ್ಸ್) ನಿರ್ಮಾಣ ಸಂಬಂಧವಾಗಿ ಕರ್ನಾಟಕ ಸರಕಾರ ಈಗಾಗಲೇ ಹುಬ್ಬಳ್ಳಿ-ಧಾರವಾಡದ ಹೆಸರನ್ನ ಕಳಿಸಿದ್ದು, ಅದಕ್ಕಾಗಿ ಕೇಂದ್ರ ಸರಕಾರದ ತಂಡ ಕೂಡಾ ಸ್ಥಳವನ್ನ ಪರಿಶೀಲನೆ ಮಾಡಿದ್ದಾರೆಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಅಶ್ವಿನಕುಮಾರ ಚೌಭೆ ಮಾಹಿತಿಯನ್ನ ನೀಡಿದ್ದಾರೆ.
ಕರ್ನಾಟಕದ ಸಂಸದೆ ಶೋಭಾ ಕರಂದಾಜ್ಞೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಕಲಬುರಗಿ ಇಎಸ್ಐ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಿ ಏಮ್ಸ್ ಮಾಡುವ ಕುರಿತು ಉತ್ತರ ನೀಡಿದ್ದು, ಸಧ್ಯ ಕಲಬುರಗಿಯಲ್ಲಿ ಅಂತಹ ಯಾವುದೇ ಯೋಜನೆಗಳು ಬರುವುದಿಲ್ಲವೆಂದು ಹೇಳಿದ್ದಾರೆ.
ಈ ಉತ್ತರದಿಂದ ಸ್ಪಷ್ಟವಾದ ನಿಲುವು ಸಿಕ್ಕಿದ್ದು, ಹುಬ್ಬಳ್ಳಿಗೆ ಏಮ್ಸ್ ಬರುವುದು ನಿಶ್ಚಿತವಾದಂತೆ. ಯಾವಾಗ, ಜಾಗವನ್ನ ಎಲ್ಲಿ ನೋಡಿ ಹೋಗಿದ್ದಾರೆ ಎಂಬುದು ಇನ್ನೂ ತಿಳಿದು ಬರಬೇಕಿದೆ. ಆದರೆ, ಮೂಲದ ಪ್ರಕಾರ ಸುಮಾರು 200 ಎಕರೆ ಜಮೀನನ್ನ ಏಮ್ಸಗೆ ನೀಡಲು ಸರಕಾರ ಮುಂದೆ ಬಂದಿದ್ದು, ಹುಬ್ಬಳ್ಳಿಯ ಸಮೀಪದರಲ್ಲೇ ಈ ಜಾಗವಿದೆ ಎಂದು ಹೇಳಲಾಗಿದೆ.