ಕುಸುಗಲ್- ಬ್ಯಾಹಟ್ಟಿ ರಸ್ತೆಯಲ್ಲಿ ಬಸ್ ಹಾಯ್ದು ಅಳಗವಾಡಿಯ ಸವಾರ ದುರ್ಮರಣ…

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್‌ನ್ನ ಓವರ್‌ಟೇಕ್ ಮಾಡಲು ಹೋದ ಸಮಯದಲ್ಲಿ ಬೈಕ್ ಬಿದ್ದು, ವ್ಯಕ್ತಿಯೊಬ್ಬನ ಮೇಲೆ ಬಸ್ ಹಾಯ್ದು ಸ್ಥಳದಲ್ಲಿ ಸಾವಿಗೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಕುಸುಗಲ್ ರಸ್ತೆಯಲ್ಲಿ ಸಂಭವಿಸಿದೆ.
ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಬಸವರಾಜ ಹನಸಿ ಎಂಬ ಬೈಕ್ ಸವಾರನೇ ಸಾವಿಗೀಡಾಗಿದ್ದಾನೆ. ಬಸ್‌ನ್ನ ಹಿಂದೆ ಹಾಕಲು ಹೋದಾಗ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಬಸ್ಸಿನ ಹಿಂಬದಿ ಚಕ್ರ ಆತನ ತಲೆಯ ಮೇಲೆ ಹಾಯ್ದಿದೆ.
ಘಟನೆಯ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಮಾಹಿತಿಯನ್ನ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.