ಹುಬ್ಬಳ್ಳಿ ಪ್ರೆಸಿಡೆಂಟ್ ಹೊಟೇಲ್ ಬಳಿ ದುರ್ಘಟನೆ: ದುರ್ಮರಣಕ್ಕೀಡಾದ ಧಾರವಾಡದ ಯುವಕ…

ಹುಬ್ಬಳ್ಳಿ: ವೇಗವಾಗಿ ಬಂದು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲಿ ಸಾವಿಗೀಡಾದ ಘಟನೆ ಉಣಕಲ್ ಬಳಿಯ ಪ್ರೆಸಿಡೆಂಟ್ ಹೊಟೇಲ್ ಬಳಿ ಸಂಭವಿಸಿದೆ.
ಮೃತ ಯುವಕನನ್ನ ಧಾರವಾಡದ ನಿಜಾಮುದ್ದೀನ ಕಾಲನಿ ನಿವಾಸಿ ಇಜಾಜ್ ಎಂದು ಗುರುತಿಸಲಾಗಿದ್ದು, ಡಿಕ್ಕಿಯ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಿ ಠಾಣೆಯ ಪೊಲೀಸರು ಮಾಹಿತಿಯನ್ನ ಕಲೆ ಹಾಕಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.