Posts Slider

Karnataka Voice

Latest Kannada News

ಪ್ರೇಮಿಗಳ ದಿನಾಚರಣೆಯಂದೇ “ಐ ಲವ್ ಹುಬ್ಬಳ್ಳಿ ಧಾರವಾಡ” ಎಂದ ಆಪ್…!

1 min read
Spread the love

ಹುಬ್ಬಳ್ಳಿ: ನಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನವನ್ನ ವ್ಯಕ್ತಪಡಿಸಿ, ವಿಶ್ವದರ್ಜೆಯ ಹು-ಧಾ ಕಟ್ಟುವ ಸಂಕಲ್ಪ ಮಾಡುವ ಕುರಿತು ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಲು ಆಮ್ ಆದ್ಮಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ *ಐ ಲವ್ ಹುಬ್ಬಳ್ಳಿ-ಧಾರವಾಡ* ಬೃಹತ್ ಪಾದಯಾತ್ರೆಗೆ ಇಂದು ಹುಬ್ಬಳ್ಳಿಯ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ.ರಾಮಲಿಂಗಪ್ಪ ಅಂಟರತಾನಿ, ಒಬ್ಬ ವ್ಯಕ್ತಿ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಲೇಬೇಕು. ಅಂದಾಗ ಆತನ ಜನ್ಮ ಸಾರ್ಥಕ. ಹಾಗೇ ಪ್ರತಿಯೊಬ್ಬರೂ ಅಭಿವೃದ್ಧಿಯಾಗಬೇಕೆಂದರೇ ಶಿಕ್ಷಣ, ಜಾಗೃತಿ ಬಹುಮುಖ್ಯ. ಫೆಬ್ರವರಿ 14 ಪ್ರೀತಿಯ ದಿನ‌. ಈ ವಿಶೇಷ ದಿನದಂದು ವಿಶ್ವದರ್ಜೆಯ ಹು-ಧಾ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿರುವುದು ಖುಷಿ ತಂದಿದೆ ಎಂದರು.

ಗುರುನಾನಕ್ ಟ್ರಸ್ಟ್ ನ ಮುಖ್ಯಸ್ಥರಾದ ಜ್ಞಾನಿ ಮೇಜರ್ ಸಿಂಗ್ ಮಾತನಾಡಿ, ಯಾವುದೇ ಒಂದು ಕೆಲಸ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಮಾಡಬೇಕೆಂದರೆ ಅದು ಕೇವಲ ಪ್ರೀತಿಯಿಂದ. ಆದರೆ ಇತ್ತಿಚಿನ ದಿನಗಳಲ್ಲಿ ದೇಶದಲ್ಲಿ ವಿಭಜನೆಯಂತಹ ಪರಿಸ್ಥಿತಿ ಕಂಡುಬರುತ್ತಿವೆ. ಅದನ್ನು ಬಿಟ್ಟು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಈ ಹಿನ್ನೆಲೆ ನಾವು ಕೂಡಾ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದರು. ಅದೇ ರೀತಿಯಾಗಿ ಮೌಲಾನಾ ಸೈಯದ್ ನಿಸಾರ್ ಅಹಮ್ಮದ್ ಛಗನ, ನವೋದ್ಯಮಿ ಉದ್ಯಮದ ಸಂಸ್ಥಾಪಕರಾದ ಡಾ.ನಿಲಂ ಮಹೇಶ್ವರಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಸಂತೋಷ ನರಗುಂದ, ಪ್ರೀತಿ ಎಂಬುದು ಕೇವಲ ವ್ಯಕ್ತಿಗಳ ಮಧ್ಯೆ ಸೀಮಿತವಲ್ಲ. ಹಾಗಾಗಿ ನಮ್ಮ ದೇಶದ ಮಹಾನ್ ವ್ಯಕ್ತಿಗಳ ತಿಳಿಸಿರುವಂತೆ ಇಂದು ನಾವು ಜಾತಿ, ಮತ, ಕುಲ, ಭೇದ ಮರೆತು ಪ್ರೀತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಎಲ್ಲೆಡೆ ಸಾರಬೇಕಾಗಿದೆ. ಈ ಮಹತ್ತರ ಕಾರ್ಯಕ್ಕೆ ಆಮ್ ಆದ್ಮಿ ಪಕ್ಷ ಮುಂದಾಗಿದ್ದು ಇದಕ್ಕೆ ಅವಳಿನಗರದ ಎಲ್ಲ ಜನತೆ ಕೈಜೋಡಿಸಬೇಕು.

ನಮ್ಮ ರಾಷ್ಟ್ರ ಇಂದು ಅತ್ಯಂತ ನಿರ್ಣಾಯಕ ಕಾಲಘಟ್ಟದಲ್ಲಿ ಬಂದು ನಿಂತಿದೆ. ಈ ವೇಳೆ ದೇಶದ ಮತ್ತು ರಾಜ್ಯದ ಬುದ್ದಿವಂತ ನಾಗರೀಕರು ಸಾಂಪ್ರದಾಯಿಕ ಪಕ್ಷಗಳ ದ್ವೇಷ, ವಿಭಜನೆಯ ರಾಜಕೀಯ ಹಾಗೂ ಆಮ್ ಆದ್ಮಿ ಪಕ್ಷದ ಪ್ರೀತಿ ಮತ್ತು ಬಂಧುತ್ವದ ಕಾಯಕದ ರಾಜಕೀಯದ ನಡುವೆ ಆರಿಸಬೇಕಾಗಿದೆ. ಎಲ್ಲರೂ ಒಗ್ಗೂಡಿ ಹು-ಧಾ ಕಟ್ಟುವ ಅವಶ್ಯಕತೆ ಇದೆ. ನಮ್ಮ ಹು-ಧಾ ಮಹಾನಗರವನ್ನು ದೆಹಲಿ ಮಾದರಿಯಲ್ಲಿ ಕಟ್ಟಿ ಅತ್ಯುತ್ತಮ ನಗರಗಳ ಸಾಲಿನಲ್ಲಿ ನಿಲ್ಲಿಸಲು ನಾವೆಲ್ಲರೂ ಇಂದು ಸಂಕಲ್ಪ ಮಾಡಬೇಕೆಂದರು.

ವ್ಯಾಲೆಂಟೈನ್ ಡೇ ಪ್ರೀತಿಯ ದಿನವಾದ ಇಂದು ನಗರದ ನಾಗರಿಕರಲ್ಲಿ ಪ್ರೀತಿ ಸಹಬಾಳ್ವೆಯ ಸಂದೇಶದ ಜೊತೆಗೆ ಹು-ಧಾ ಮಹಾನಗರವನ್ನು ದೇಶದ ಮತ್ತು ಜಗತ್ತಿನ ಅತ್ಯುನ್ನತ ನಗರಗಳ ಸಾಲಿನಲ್ಲಿ ತೆಗೆದುಕೊಂಡು ಹೋಗಿ ನಿಲ್ಲಿಸುವ ಸಂಕಲ್ಪವನ್ನು ಮಾಡಲು ಇಂದು ಬೆಳಿಗ್ಗೆ 10:30 ಕ್ಕೆ ಆರಂಭವಾಗಿರುವ ಐ ಲವ್ ಹು-ಧಾ ಬೃಹತ್ ಪಾದಯಾತ್ರೆ ಮೂಲಕ ಮನೆ, ಮನೆಗೆ ತಲುಪುವ ಅಭಿಯಾನವನ್ನು ಧಾರವಾಡ ಜಿಲ್ಲಾ ಸಮಿತಿಯಿಂದ ನಡೆಸಲಾಯಿತು. ಬೆಳಗ್ಗೆ 11.00 ಗಂಟೆಗೆ ಚೆನ್ನಮ್ಮ ವೃತ್ತದಿಂದ ಪ್ರಾರಂಭವದ ಪಾದಯಾತ್ರೆ, ಲ್ಯಾಮಿಂಗ್ಟನ್ ರಸ್ತೆ, ದುರ್ಗದ ಬಯಲು ವೃತ್ತ, ನಗರೇಶ್ವರ ದೇವಸ್ಥಾನ ಮಾರ್ಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ತೆರಳಿ ಹಳೇಹುಬ್ಬಳ್ಳಿ ಸರ್ಕಲ್ ಮಾರ್ಗವಾಗಿ ಸಿದ್ದಾರೋಢಮಠವನ್ನು ತಲುಪಿ ಕೊನೆಗೊಳ್ಳಲಿದೆ.

ಪಾದಯಾತ್ರೆ ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಅನಂತಕುಮಾರ ಭಾರತೀಯ, ಶಿವಕಿರಣ ಅಗಡಿ, ಪಕ್ಷದ ಮುಖಂಡರಾದ ಲಕ್ಷ್ಮಣ ರಾಥೋಡ, ವಿಜಯ ಸಾಯಿ, ತ್ಯಾಗರಾಜ, ಅಬ್ದುಲ್ ರಹುಫ್, ಶಿವಕುಮಾರ್ ಬಾಗಲಕೋಟೆ, ಮೆಹಬೂಬ್ ಹರವಿ, ಅಶ್ವೀನ ಕುಬಸದಗೌಡರ, ಮಂಜುನಾಥ ಸುಳ್ಳದ, ಲಕ್ಷ್ಮಣ ನರಸಾಪುರ, ಉದಯ ಫೆಂಡ್ಸೆ, ಶರೀಫ್ ಸಾಬ ಮಡೀಕೇಶ್ವರ, ನವೀನಸಿಂಗ್ ರಜಪೂತ,‌ ಲತಾ ಅಂಗಡಿ, ರೂಪಾಯಿ ನರಗುಂದ, ಸುನಂದ ಕರಡಿಗುಡ್ಡ, ವಿದ್ಯಾ ನಾಡಿಗೇರ್, ವಿಜಯಲಕ್ಷ್ಮಿ ಹೊಳ್ಳೆನ್ನವರ, ಪ್ರಶಾಂತ ಹುಲಗೇರಿ, ರೇವಣ್ಣಸಿದ್ದಪ್ಪ ಹುಬ್ಬಳ್ಳಿ, ಜಡೇನವರ,ಎಸ್.ಎಫ್.ಪಾಟೀಲ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. ಸ್ವಾಗತವನ್ನು ಕಾರ್ಯದರ್ಶಿ ಪ್ರತಿಭಾ ದಿವಾಕರ ಮಾಡಿದರು, ಪ್ರಾಸ್ತಾವಿಕ ನುಡಿಗಳನ್ನು ಕಾರ್ಯಕಾರಿ ಸಮಿತಿ ಸದಸ್ಯ ಶಶಿಕುಮಾರ್ ಸುಳ್ಳದ ಆಡಿದರು. ನಿರೂಪಣೆಯನ್ನು ಸಂತೋಷ ಮಾನೆ ಮಾಡಿದರು.


Spread the love

Leave a Reply

Your email address will not be published. Required fields are marked *

You may have missed