“14 ಸೆಕೆಂಡಿನ ವಾಟ್ಸಾಫ್ ಸ್ಟೇಟಸ್”- ಹಳೇಹುಬ್ಬಳ್ಳಿಯಲ್ಲಿ ‘ಅಶಾಂತಿ’: “24 ಗಂಟೆ 1’44’ ಕಲಂ ಜಾರಿ…

ಹುಬ್ಬಳ್ಳಿ: ಒಂದು ಕೋಮಿನ ಭಾವನೆಯನ್ನ ಕೆರಳಿಸುವ ವಾಟ್ಸಾಫ್ ಸ್ಟೇಟಸ್ ಪ್ರಕರಣವೊಂದು ಹಳೇಹುಬ್ಬಳ್ಳಿಯನ್ನ ಅಕ್ಷರಸಃ ಹಾಳು ಮಾಡಿದ್ದು, ಜನರ ನೆಮ್ಮದಿಯ ಜೊತೆಗೆ ಸರಕಾರದ ಆಸ್ತಿ ಪಾಸ್ತಿ ಹಾನಿಗೀಡಾಗಿದೆ.
ಹಳೇಹುಬ್ಬಳ್ಳಿ ಪತೇಶಾವಲಿ ದರ್ಗಾದ ಬಳಿ ಒಂದು ಕೋಮಿನ ಜನ ಸೇರಿ, ಭಾವನೆಗೆ ದಕ್ಕೆ ಮಾಡಿರುವ ವ್ಯಕ್ತಿಯನ್ನ ಬಂಧಿಸಬೇಕೆಂದು ಒತ್ತಾಯ ಮಾಡುತ್ತಿದ್ದರು. ಇದೇ ಸಮಯದಲ್ಲಿ ಗಲಾಟೆ ಆರಂಭವಾಗಿದೆ. ಆಗ ಏನೇನು ನಡೆದಿದೆ, ಇಲ್ಲಿವೆ ದೃಶ್ಯಾವಳಿಗಳು.
https://fb.watch/cqSBpOTwVS/
ಸಾವಿರಾರು ಜನ ಸೇರಿದ್ದರಿಂದ ಪೊಲೀಸರಿಗೂ ನಿಯಂತ್ರಣ ಮಾಡಲು ಆಗಿಲ್ಲ. ಹೀಗಾಗಿ ಹಲವು ಪೊಲೀಸ್ ವಾಹನಗಳು ಜಖಂಗೊಂಡಿವೆ. ಪೊಲೀಸ್ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ ಸೇರಿದಂತೆ ಹಲವು ಪೊಲೀಸರಿಗೆ ಮತ್ತು ಕೆಲ ಸಾರ್ವಜನಿಕರಿಗೂ ಪೆಟ್ಟಾಗಿದೆ. ಈ ಬಗ್ಗೆ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಮಾಹಿತಿ ನೀಡಿದ್ದು, 24 ಗಂಟೆ ನಗರದಲ್ಲಿ 144ಕಲಂ ಜಾರಿಗೆ ಮಾಡಲಾಗಿದೆ ಎಂದಿದ್ದಾರೆ.
ಒಂದು ಕೋಮಿನ ಭಾವನೆ ಕೆರಳಿಸುವ ಸ್ಟೇಟಸ್ ಹಾಕಿದ್ದವನನ್ನ ಮತ್ತು ಗಲಾಟೆ ಮಾಡಿದವರನ್ನ ಬಂಧನ ಮಾಡುತ್ತೇವೆ. ಜನರು ಕೂಡಾ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕಾರ ನೀಡಬೇಕೆಂದು ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಮನವಿ ಮಾಡಿಕೊಂಡಿದ್ದಾರೆ.