ಹುಬ್ಬಳ್ಳಿಯಲ್ಲಿ ಉದ್ಯಮಿ ಸುರೇಶ ಬೋನಗೇರಿ ಬಂಧನ…
1 min readಹುಬ್ಬಳ್ಳಿ: ಮಗ ಮಾಡಿದ ತಪ್ಪಿಗಾಗಿ ನಗರದ ಉದ್ಯಮಿಯೋರ್ವ ದಂಪತಿಗಳನ್ನ ಹತ್ತು ದಿನಗಳವರೆಗೆ ಕೂಡಿ ಹಾಕಿರುವ ಪ್ರಕರಣವೊಂದು ಬಯಲಿಗೆ ಬಂದಿದ್ದು, ಉದ್ಯಮಿಯನ್ನ ಕೇಶ್ವಾಪುರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.
ಪರ್ಟಿಲೈಸರ್ ಕಂಪನಿಯ ಮಾಲೀಕ ಸುರೇಶ ಬೋನಗೇರಿ ಎಂಬಾತನೇ ಅಂತಹ ದುರುಳತನ ಮಾಡಿದ್ದು, ಪೊಲೀಸರು ಕೈಕೊಳ ತೊಡೆಸಿದ್ದಾರೆ.
ಘಟನೆಯ ವಿವರ: ಉಮೇಶ ಗಡ್ಡದ ಎಂಬ ಚಾಲಕ ಸುರೇಶ ಬೋನಗೇರಿ ಅವರ ಕಾರನ್ನ ಹಿಂದೆ ತೆಗೆಯುತ್ತಿದ್ದಾಗ ವಿದ್ಯುತ್ ಕಂಬಕ್ಕೆ ತಗುಲಿ ಜಖಂಗೊಂಡಿದೆ. ಇದೇ ಕಾರಣದಿಂದ ಕಾರಿನ ರಿಪೇರಿಗೆ ತಗುಲುವ ವೆಚ್ಚವನ್ನ ನೀಡಬೇಕೆಂದು ಬೋನಗೇರಿ ಹೇಳಿದ್ದಾರೆ. ಆದರೆ, ಹಣವಂತರಲ್ಲದ ಉಮೇಶ ಭಯದಿಂದ ಬೇರೆ ಕಡೆ ಹೋಗಿದ್ದರಿಂದ ಉಮೇಶನ ತಂದೆ ಬಸಪ್ಪ ಗಡ್ಡದ ಹಾಗೂ ಉಮೇಶನ ತಾಯಿಯನ್ನ ರೂಮಿನಲ್ಲಿ ಕೂಡಿ ಹಾಕಿದ್ದಾರೆಂದು ಗೊತ್ತಾಗಿದ್ದು, ಪೊಲೀಸರು ಇಬ್ಬರನ್ನ ರಕ್ಷಣೆ ಮಾಡಿದ್ದಾರೆ.
ಉದ್ಯಮಿ ಸುರೇಶ ಬೋನಗೇರಿ ಜೊತೆಗೆ ಶಿವು ಕೊಳ್ಳಿ ಹಾಗೂ ವಾಚಮನ್ ಬಸಯ್ಯನ ಮೇಲೆ ಪ್ರಕರಣ ದಾಖಲಾಗಿದೆ. ಕೇಶ್ವಾಪುರ ಠಾಣೆಯ ಪೊಲೀಸರು ಉದ್ಯಮಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.