ಧಾರವಾಡ “ಬೃಂದಾವನ್ ಹೊಟೇಲ್” ಎಸಿಪಿಗೆ ಮಾಹಿತಿ ಕೊಟ್ಟ “ಪರವೂರಿನ ಎಸಿಪಿ”…
1 min readಧಾರವಾಡ: ನಗರದ ಹೊರವಲಯದ ಜಮೀನು ವ್ಯಾಜ್ಯದ ಜಗಳಕ್ಕಾಗಿ ಹೊಟೇಲ್ ನಲ್ಲಿ ಕೊಲೆ ಮಾಡುವ ಉಸಾಬರಿ ಮಾತಾಡಿದ್ದನ್ನ ಕೇಳಿಸಿಕೊಂಡ ಬೇರೆ ಜಿಲ್ಲೆಯ ಎಸಿಪಿಯೊಬ್ಬರು ಸ್ಥಳೀಯ ಎಸಿಪಿಗೆ ಮಾಹಿತಿ ನೀಡಿದ ಘಟನೆ ಧಾರವಾಡದ ಬೃಂದಾವನ ಹೊಟೇಲ್ ಬಳಿ ನಡೆದಿದೆ.
ಎಸಿಪಿ ವಿಜಯಕುಮಾರ ತಳವಾರ ಅವರಿಗೆ ಮಾಹಿತಿ ಸಿಕ್ಕಿದ್ದೆ ತಡ, ಬೇರೆ ಬೇರೆ ಠಾಣೆಯ ಹಲವರು ಅಲ್ಲಿಗೆ ತೆರಳಿದ್ದಾರೆ. ಅಷ್ಟರಲ್ಲಿಯೇ ಬೇರೆ ವಾಹನದಲ್ಲಿ ಡೀಲಿಂಗ್ ಮಾತಾಡುತ್ತಿದ್ದವರು ಹೊರಟಾಗ, ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ.
ಡೀಲಿಂಗ್ ನಡೆಸುತ್ತಿದ್ದವರ ತಪಾಸಣೆ ಮಾಡಿದ ವೇಳೆಯಲ್ಲಿ ಏರ್‌ಗನ್, ಉದ್ದನೆಯ ಬರ್ಚಿ, ಬೇಸ್ ಬ್ಯಾಟ್ ಸೇರಿದಂತೆ ಹಲವು ಮಾರಕಾಸ್ತ್ರಗಳು ಲಭಿಸಿವೆ. ತಕ್ಷಣವೇ ಅವರನ್ನ ವಿದ್ಯಾಗಿರಿ ಪೊಲೀಸ್ ಠಾಣೆಗೆ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.