ಹೊಟೇಲ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ ನೀಡಿದ ಪೊಲೀಸ್ ಕಮೀಷನರ್…!

ಕಲಬುರಗಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಹಲವರಿಗೆ ಊಟದ ತೊಂದರೆಯಾಗುತ್ತಿದೆ ಎಂದುಕೊಂಡು ಕಲಬುರಗಿ ಪೊಲೀಸ್ ಕಮೀಷನರ್ ಹೊಟೇಲ್ ಗಳಿಂದ ಪಾರ್ಸೆಲ್ ಕೊಡಲು ಮತ್ತೂ ಆನ್ ಲೈನ್ ಮೂಲಕ ಆಹಾರ ತರಿಸಿಕೊಳ್ಳಲು ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ಪೊಲೀಸ್ ಕಮೀಷನರ್ ಡಾ.ವೈ.ಎಸ್. ರವಿಕುಮಾರ ಅವರು ಆದೇಶವನ್ನ ಮಾಡಿದ್ದಾರೆ. ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 8 ಗಂಟೆಯವರೆಗೂ ಊಟ, ತಿಂಡಿಗಳ ಪಾರ್ಸೆಲ್ ಗೆ ಅವಕಾಶ ನೀಡಲಾಗಿದ್ದು, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಸೂಚನೆ ನೀಡಲಾಗಿದೆ.
ಹೊಟೇಲ್ ಗೆ ಪಾರ್ಸಲ್ ಕೊಡಲು ಮತ್ತೂ ಆನ್ ಲೈನ್ ಮೂಲಕ ಆರ್ಡರ್ ಪಡೆದು ಸರಬರಾಜು ನೀಡಲು ಅವಕಾಶ ಕೊಡುವಂತೆ ಮನವಿ ಮಾಡಿಕೊಂಡಿದ್ದರಿಂದ ಇಂದಿನಿಂದಲೇ ಈ ಅವಕಾಶವನ್ನ ಪೊಲೀಸ್ ಕಮೀಷನರ್ ನೀಡಿದ್ದಾರೆ.