ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಮಹಿಳೆಯ ಸಾವು: ವೈಧ್ಯನಿಗೆ ಗೂಸಾ ಪ್ರಯತ್ನ- ಪೊಲೀಸ್ ಠಾಣೆಗೆ ಓಡೋಡಿ ಹೋದ ಡಾಕ್ಟರ್…!
1 min readಹುಬ್ಬಳ್ಳಿ: ನಗರದ ಜನತಾ ಬಜಾರನದಲ್ಲಿರುವ ಭಾಸ್ಕರರಾವ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯೋರ್ವರು ಸಾವಿಗೀಡಾದ್ದರಿಂದ ಸಂಬಂಧಿಕರು ವೈಧ್ಯನಿಗೆ ಗೂಸಾ ಕೊಡಲು ಮುಂದಾದ ಘಟನೆ ನಡೆದಿದೆ.
ಡಾ.ಭಾಸ್ಕರಾವ್ ಅವರ ಎಲುವು ಕೀಲು ಮತ್ತು ಅಪಘಾತ ಚಿಕಿತ್ಸಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಉಣಕಲ್ ಗ್ರಾಮದ ಶಾಂತಮ್ಮ ಎಂಬ ಮಹಿಳೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು, ವೈಧ್ಯರನ್ನ ಥಳಿಸಲು ಮುಂದಾಗಿದ್ದಾರೆ.
ಇದನ್ನ ಅರಿತ ಡಾ.ಭಾಸ್ಕರರಾವ್ ಅವರು ಉಪನಗರ ಠಾಣೆಗೆ ಓಡೋಡಿ ಬಂದ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆಯಲ್ಲಿ ಭಾಗಿಯಾದವರ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.