ಶಿಕ್ಷಕರಿಗೂ ರಜೆ ನೀಡಿ: ಹೊರಟ್ಟಿ, ಕುಬೇರಪ್ಪ ಆಗ್ರಹ
1 min readಬೆಂಗಳೂರು: ಕೊರೋನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ, ಅಲ್ಲಿಗೆ ಬರುವ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ರಜೆ ನೀಡಿಲ್ಲ. ತಕ್ಷಣವೇ ಶಿಕ್ಷಕರಿಗೂ ರಜೆ ನೀಡಬೇಕೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಿಧಾನಪರಿಷತ್ ನಲ್ಲಿ ಆಗ್ರಹಿಸಿದ್ದಾರೆ.
ಸರಕಾರಿ ಶಾಲೆಗಳು ಸೇರಿದಂತೆ ಹಲವು ಖಾಸಗಿ ಶಾಲೆಗಳಲ್ಲಿ 60ರಿಂದ 100 ಶಿಕ್ಷಕ ಸಮೂಹ ಇರತ್ತೆ. ಅವರು ತರಗತಿಗಳು ಇಲ್ಲದೇ ಇರುವುದರಿಂದ ಒಂದೇ ಕಡೆ ಕೂತು ಮಾತನಾಡುತ್ತಾರೆ. ಆಗ ಸಮಸ್ಯೆಯಾಗಬಹುದು. ಇದನ್ನ ಸರಕಾರ ಗಮನಿಸಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕುಬೇರಪ್ಪ, ಮಕ್ಕಳು ಶಾಲೆಯಲ್ಲಿ ಇಲ್ಲದಾಗ ಶಿಕ್ಷಕರೇನು ಮಾಡಬೇಕು. ಅವರಿಗೂ ರಜೆ ನೀಡಿ, ಶಿಕ್ಷಕರ ಆರೋಗ್ಯಕ್ಕೂ ಮಹತ್ವ ನೀಡಿ ಎಂದಿದ್ದಾರೆ.