ಇಂದೋರ್‌ನಲ್ಲಿ “ಶೆಟ್ಟರ್, ಹೊರಟ್ಟಿ, ಅಶೋಕ್, ಮುನೇನಕೊಪ್ಪ”- ಬಿಜೆಪಿಯಲ್ಲಿ ನಡೆಯುತ್ತಿರುವುದೇನು…!?

ರಾಜ್ಯದ ಭಾರತೀಯ ಜನತಾ ಪಕ್ಷದ ನಾಯಕರು ಮಧ್ಯಪ್ರದೇಶದಲ್ಲಿ
ಬಿಜೆಪಿಗೆ ಸೇರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜೊತೆ ಹೊರಟ್ಟ
ಮಧ್ಯಪ್ರದೇಶ: ರಾಜ್ಯದ ಭಾರತೀಯ ಜನತಾ ಪಕ್ಷದ ನಾಯಕರು ಇಂದೋರ್‌ನಲ್ಲಿ ಬೀಡು ಬಿಟ್ಟಿದ್ದು, ಇಂದು ತಡರಾತ್ರಿ ನವದೆಹಲಿಗೆ ತೆರಳಲಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೊತೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ, ಅಶ್ವತ್ಥ ನಾರಾಯಣ ಜೊತೆಗೂಡಿ ಹೋಗಿದ್ದು, ಸಾಕಷ್ಟು ಕೌತುಕ ಮೂಡಿಸಿದೆ.
ಇಂದೋರ್‌ನಲ್ಲಿ ಸಂಘದ ಪ್ರಮುಖರನ್ನ ಭೇಟಿಯಾಗಿದ್ದಾರೆಂದು ಹೇಳಲಾಗಿದೆ. ಈ ಭೇಟಿಯ ನಂತರ ನವದೆಹಲಿಗೆ ತೆರಳಿದ್ದು, ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಚರ್ಚೆ ಆರಂಭವಾಗಿದೆ.