ವಿಭಿನ್ನವಾಗಿ ಬರ್ತಡೇ ಆಚರಿಸಿದ ‘ಹೋಂ ಮಿನಿಸ್ಟರ್’ ಅಭಿಮಾನಿಗಳು…!

ಹಾವೇರಿ: ನನ್ನ ಬರ್ತಡೇಗೆ ಯಾರೂ ನನಗೆ ಮಾಲೆ, ಶಾಲು, ಉಡುಗೊರೆ ಕೊಡುವುದು ಬೇಡ. ಅಲ್ಲಿ ವ್ಯಯ ಮಾಡುವ ಹಣವನ್ನ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಮಾತಿಗೆ, ಅವರ ಅಭಿಮಾನಿಗಳು ಮತ್ತಷ್ಟು ಪ್ರೀತಿಯಿಂದ ಬರ್ತಡೇ ಆಚರಣೆ ಮಾಡಿದರು.
ಶಿಗ್ಗಾಂವಿಯ ಗೃಹ ಸಚಿವರ ನಿವಾಸದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮವನ್ನ ವಿಭಿನ್ನವಾಗಿ ಆಚರಣೆ ಮಾಡಲಾಯಿತು. ಕೊರೋನಾ ಮಹಾಮಾರಿಯ ಸಮಯದಲ್ಲಿ ಮನೆ ಮನೆಗೆ ಭೇಟಿ ನೀಡಿದ ಆಶಾ ಕಾರ್ಯಕರ್ತರನ್ನ ಸತ್ಕರಿಸುವ ಮೂಲಕ, ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಜನ್ಮದಿನವನ್ನ ಆಚರಣೆ ಮಾಡಲಾಯಿತು.
ಬಸವರಾಜ ಬೊಮ್ಮಾಯಿ ಬಳಗದ ಶಿವಾನಂದ ಮ್ಯಾಗೇರಿ, ರೇಣಕನಗೌಡ ಪಾಟೀಲ, ಶ್ರೀಕಾಂತ ಬುಳಕ್ಕನವರ, ಬಸವರಾಜ ನಾರಾಯಣಪೂರ, ಚೇತನ ಕಲಾಲ, ನರಹರಿ ಕಟ್ಟಿ, ಹನುಮಂತಪ್ಪ ಗುಳೇದ, ಶಿವರಾಜ ರಾಯಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.