ಬೆಳ್ಳಂಬೆಳಿಗ್ಗೆ ಕಣ್ಣೀರಿಟ್ಟ ಗೃಹ ಸಚಿವ ಬಸವರಾಜ ಬೊಮ್ಮಾಯಿ…!

ಬೆಂಗಳೂರು: ಅದು ಅವರ ಮನೆಯ ಖುಷಿಯಲ್ಲೊಂದು ಭಾಗವಾಗಿತ್ತು. ಇವರೆಂದರೇ, ಅದಕ್ಕೆ ಎಲ್ಲಿಲ್ಲದ ಪ್ರೀತಿ. ಹಾಕಿದ ತುತ್ತು ಅನ್ನಕ್ಕೆ ಋಣವಾಗಿದ್ದ ‘ಸನ್ನಿ’ ಮರೆಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಣ್ಣೀರಿಟಿದ್ದಾರೆ.

ವಯೋಸಹಜ ರೀತಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಸಾಕು ನಾಯಿ ಸನ್ನಿ ಸಾವಿಗೀಡಾಗಿದೆ. ಇದರಿಂದ ಕಣ್ಣೀರಿಡುವ ಸ್ಥಿತಿಯಲ್ಲಿ ಸಚಿವರಿದ್ದು, ಸ್ವತಃ ಮುಂದೆ ನಿಂತು ಅದರ ಕಾರ್ಯವನ್ನ ಮಾಡಿ ಮುಗಿಸಿದ್ದಾರೆ.

ಸನ್ನಿಯ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಮನೆಯವರೆಲ್ಲರಿಗೂ ನೋವಾಗಿದೆ ಎಂಬುದನ್ನ ಹೇಳಿಕೊಂಡಿದ್ದಾರೆ.